ಕಳೆದ 30 ವರ್ಷಗಳ ಚುನಾವಣೆ ಫಲಿತಾಂಶದಲ್ಲಿನ ಎಲ್ಲ ದಾಖಲೆಗಳನ್ನು ಬಿಜೆಪಿ ಮುರಿದಿದೆ. ದೇಶದಲ್ಲಿ ಶೇ. 59 ಕ್ಕಿಂತ ಹೆಚ್ಚು ಮತಗಳನ್ನು ಬಿಜೆಪಿ ಪಡೆದಿದ್ದು, ನಾಗಲೋಟ ಮುಂದುವರಿಸಿದೆ.
542 ರಲ್ಲಿ 347 ಕ್ಷೇತ್ರಗಳಲ್ಲಿ ಎನ್ ಡಿಎ, ಯುಪಿಎ 91 ಮತ್ತು ಇತರರು 104 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
1984 ರಲ್ಲಿ ಕಾಂಗ್ರೆಸ್ ಗಳಿಸಿದ್ದ ಶೇಕಡಾವಾರು ಮತ ಪ್ರಮಾಣಕ್ಕಿಂತ ಬಿಜೆಪಿ ಹೆಚ್ಚಿನ ಪ್ರಮಾಣದಲ್ಲಿ ಮತ ಪಡೆದು ದಾಖಲೆ ನಿರ್ಮಾಣ ಮಾಡಿದೆ. ಕಾಂಗ್ರೆಸ್ ರಾಹು ಕಾಲ ಶುರುವಾದಂತಿದ್ದು, ಆರು ರಾಜ್ಯಗಳಲ್ಲಿ ಸೊನ್ನೆ ಕ್ಷೇತ್ರಗಳ ಸಾಧನೆ ಮಾಡಿದ್ದು, ಯಾವ ಕ್ಷೇತ್ರದಲ್ಲಿಯೂ ಖಾತೆ ತೆರೆಯಲು ವಿಫಲವಾಗಿದೆ.