ಜಮಾತ್ ಉಲೆಮಾ-ಇ-ಹಿಂದ್ ಪರವಾಗಿ ನಿಂತು ತ್ರಿವಳಿ ತಲಾಕ್ ವಿರೋಧಿಸುತ್ತಿರುವ ತೃಣಮೂಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿನ 1.5ಕೋಟಿ ಮುಸ್ಲಿಂ ಮಹಿಳೆಯರನ್ನು ಪರಿಗಣಿಸದೇ ಮತಬ್ಯಾಂಕ್ ರಾಜಕಾರಣವನ್ನು ಮಾಡುತ್ತಿದೆ ಎಂದಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಆಕೆಯ ಸಚಿವರು ಮತಬ್ಯಾಂಕ್ ರಾಜಕೀಯಕ್ಕಾಗಿ ತ್ರಿವಳಿ ತಲಾಕ್‌ನ್ನು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಅಲ್ಪಸಂಖ್ಯಾತ ಸಮುದಾಯದವರ ಭಾವನೆಗಳ ಜತೆ ಆಟವಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಲೊಕೇಶ್ ಚಟರ್ಜಿ ಹೇಳಿದ್ದಾರೆ.
ಬಿಜೆಪಿ ಸಮಾನ ಹಕ್ಕುಗಳನ್ನು ಜಾರಿ ತರಲು ಪ್ರಯತ್ನಿಸಿದರೆ, ತಾವೊಬ್ಬ ಮಹಿಳೆಯಾದರೂ ಸಹ ಮಮತಾ ಬ್ಯಾನರ್ಜಿ, ರಾಜ್ಯದ 1.5 ಕೋಟಿ ಮುಸ್ಲಿಂ ಮಹಿಳೆಯರನ್ನು ಕತ್ತಲೆಗೆ ಎಳೆಯಲು ಮತ್ತು ಅನಿಶ್ಚಿತತೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪಶ್ಚಿಮ ಬಂಗಾಳ ವಿಭಾಗದ ಜಮಾತ್ ನಾಯಕರಾಗಿರುವ ಸಿದ್ದಿಕುಲ್ಲಾ ಚೌಧರಿ ಆಯೋಜಿಸಿದ್ದ ಮೆರವಣಿಗೆಗೆ ಟಿಎಂಸಿಯ ಇಬ್ಬರು ಹಿರಿಯ ಸಚಿವರನ್ನು ಕಳುಹಿಸಿರುವುದನ್ನು ಟೀಕಿಸಿದ ಚಟರ್ಜಿ ಅಂದು ಅವರು ಮಾಡಿದ ಭಾಷಣದ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದ್ದು, ಭಾಷಣದ ಕಂಟೆಂಟ್‌ನ್ನು ಸಹ ಕಳುಹಿಸಲಾಗಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ