ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಹೆಸರು ಪ್ರಕಟಿಸಿದೆ.ಬಿಹಾರ್ ರಾಜ್ಯಪಾಲರಾದ ರಾಮಾನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.
1. ಕಾವಿಂದ್, ಉತ್ತರ ಪ್ರದೇಶದ ಕಾನ್ಪುರ್ ದೆಹತ್‌ನಲ್ಲಿ ಅಕ್ಟೋಬರ್ 1, 1945 ರಂದು ಜನಿಸಿದ್ದಾರೆ.
2. ಅವರು ಕಾನ್ಪುರ್ ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ಮತ್ತು ಕಾನೂನಿನಲ್ಲಿ ಬ್ಯಾಚುಲರ್ ಪದವಿಗಳನ್ನು ಪಡೆದಿದ್ದಾರೆ.
3. ದಲಿತ ನಾಯಕ ಕೋವಿಂದ್, ಎಪ್ರಿಲ್ 1994 ರಲ್ಲಿ ಉತ್ತರಪ್ರದೇಶದಿಂದ ರಾಜ್ಯಸಭೆ ಸಂಸದರಾದರು ಮತ್ತು ಮಾರ್ಚ್ 2006 ರಿಂದ ಎರಡು ಅವಧಿಯವರಿಗೆ 12 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
4. ಕೋವಿಂದ್ ವೃತ್ತಿಯಿಂದ ವಕೀಲರಾಗಿದ್ದಾರೆ. ಅವರು 1977 ರಿಂದ 1979 ರವರೆಗೆ ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿದ್ದರು ಮತ್ತು 1980 ರಿಂದ 1993 ರವರೆಗೂ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ಕೌನ್ಸಿಲ್ ಆಗಿದ್ದರು. ಅವರು 1978 ರಲ್ಲಿ ಸರ್ವೋಚ್ಚ ನ್ಯಾಯಾಲಯದ ಅಡ್ವೊಕೇಟ್ ಆನ್ ರೆಕಾರ್ಡ್ ಆಗಿದ್ದರು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ 1993 ರ ವರೆಗೆ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1971 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನೊಂದಿಗೆ ವಕೀಲರಾಗಿ ಸೇರಿಕೊಂಡರು.
5. ಹಲವಾರು ಪ್ರಮುಖ ಸಂಸದೀಯ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿ / ಪಂಗಡಗಳು, ಗೃಹ ವ್ಯವಹಾರಗಳ ಮೇಲೆ ಸಂಸತ್ತಿನ ಸಮಿತಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಂಸತ್ತಿನ ಸಮಿತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಂಸತ್ತಿನ ಸಮಿತಿ, ಕಾನೂನು ಮತ್ತು ನ್ಯಾಯದ ಬಗ್ಗೆ ಸಂಸದೀಯ ಸಮಿತಿಗಳ ಸಂಸತ್ತಿನ ಸಮಿತಿ. ಅವರು ರಾಜ್ಯಸಭೆಯ ಹೌಸ್ ಸಮಿತಿಯ ಅಧ್ಯಕ್ಷರಾಗಿದ್ದರು.
6. ಬಿಹಾರ್ ಗವರ್ನರ್ ಆಗಿರುವ ಕೋವಿಂದ್, ಬಿಜೆಪಿ ದಲಿತ್ ಮೋರ್ಚಾ (1998-2002) ಮಾಜಿ ಅಧ್ಯಕ್ಷ ಮತ್ತು ಆಲ್ ಇಂಡಿಯಾ ಕೋಲಿ ಸಮಾಜದ ಅಧ್ಯಕ್ಷರಾಗಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ.
7. ಕೋವಿಂದ್ ಅವರು ಲಕ್ನೌದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಮಂಡಳಿಯ ಸದಸ್ಯರಾಗಿ ಮತ್ತು ಕೊಲ್ಕತ್ತಾದ ಇಂಡಿಯನ್ ಇನ್ಶಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.
8. ಅವರು ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು 2002 ರ ಅಕ್ಟೋಬರ್ನಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
9. ಕೋವಿಂದ್ ವಿವಾಹಿತರು ಮತ್ತು ಅವರಿಗೆ ಮಗ ಮತ್ತು ಮಗಳಿದ್ದಾಳೆ.
10. ಆಗಸ್ಟ್ 8, 2015 ರಂದು ಕೋವಿಂದ್ ಬಿಹಾರದ ಗವರ್ನರ್ ಆಗಿ ನೇಮಕಗೊಂಡರು.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.