ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬಿಎಸ್ ಪಿ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.
ಬಿಎಸ್ ಪಿ ಯ ಆರು ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ಆದರೆ ಪಕ್ಷದ ನಾಯಕಿ ಮಾಯಾವತಿ, ಕಾಂಗ್ರೆಸ್ ಸೇರಿರುವ ಆರು ಶಾಸಕರಿಗೆ ವಿಪ್ ಜಾರಿಮಾಡಿದ್ದು, ಕಾಂಗ್ರೆಸ್ ಗೆ ಮತ್ತೊಂದು ಟೆನ್ಶನ್ ಶುರುವಾದಂತಾಗಿದೆ.
ಕಾಂಗ್ರೆಸ್ ಗೆ ಸೇರಿದ್ದರೂ ಸಹ ವಿಪ್ ಜಾರಿ ಮಾಡಿದ್ದರಿಂದಾಗಿ ಆ ಶಾಸಕರು ಬಿಎಸ್ ಪಿಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಇದು ಹೊಸ ಸಮಸ್ಯೆ ಉಗಮಕ್ಕೆ ಕಾರಣವಾಗುತ್ತಿದೆ.