ಭೋಪಾಲ್‌ನಲ್ಲಿ ನಡೆದ ಸಿಮಿ ಎನ್‌ಕೌಂಟರ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಜೈಲಿನಿಂದ ಕೇವಲ ಮುಸ್ಲಿಂ ಸಮುದಾಯದ ಕೈದಿಗಳೇ ಏಕೆ ಪರಾರಿಯಾಗುತ್ತಾರೆ? ಹಿಂದು ಕೈದಿಗಳು ಯಾಕೆ ಪರಾರಿಯಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಿಮಿ ಉಗ್ರರ ಎನ್‌ಕೌಂಟರ್ ನಕಲಿ ಎನ್ನುವ ಅನುಮಾನ ವ್ಯಕ್ತವಾಗುತ್ತಿರುವುದರಿಂದ ಘಟನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಭೋಪಾಲ್‌ನ ಖಾಂಡ್ವಾ ಜೈಲಿನಿಂದ ಯಾಕೆ ಕೇವಲ ಸಿಮಿ ಉಗ್ರರು ಪರಾರಿಯಾಗಿದ್ದಾರೆ. ಮುಸ್ಲಿಮರು ಮಾತ್ರ ಯಾಕೆ ಜೈಲಿನಿಂದ ಪರಾರಿಯಾಗುತ್ತಾರೆ? ಹಿಂದುಗಳು ಯಾಕೆ ಜೈಲಿನಿಂದ ಪರಾರಿಯಾಗುವುದಿಲ್ಲ ಎಂದು ಘಟನೆಗೆ ಕೋಮುವಾದ ಬಣ್ಣ ಬಳೆಯಲು ಪ್ರಯತ್ನಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಘಟನೆಯ ಬಗ್ಗೆ ತನಿಖೆ ನಡೆಸಬೇಕು. ತನಿಖೆ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಮುಸ್ಲಿಮರು ಯಾಕೆ ಜೈಲಿನಿಂದ ಪರಾರಿಯಾಗುತ್ತಾರೆ. ಇದರ ಹಿಂದಿನ ಸಮಸ್ಯೆ ಯಾವುದು ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಸಿಮಿ ಉಗ್ರರಿಂದ ಹತನಾದ ಭೋಪಾಲ್ ಜೈಲಿನ ಭದ್ರತಾ ಸಿಬ್ಬಂದಿ ರಮಾಶಂಕರ್ ಯಾದವ್ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದ ದಿನವೇ ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆ ಹೊರಬಿದ್ದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ