ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಾಥೂರಾಮ್ ಗೊಡ್ಸೆ ಮಹಾತ್ಮಾ ಗಾಂಧೀಜಿಯವರನ್ನ ಕೊಲ್ಲಲು ಬಂದಾಗ ಗೊಡ್ಸೆಯನ್ನ ಹಿಮ್ಮೆಟ್ಟಿಸಿದ್ದ ಭಿಕು ದಜಿ ಭಿಲಾರೆ ಅಲಿಯಾಸ್ ಭಿಲಾರೆ ಗುರೂಜಿ ವಿಧಿವಶರಾಗಿದ್ಧಾರೆ.
98 ವರ್ಷದ ಭಿಲಾರೆ ಗುರೂಜಿ ಮಹಾರಾಷ್ಟ್ರದ ಭಿಲಾರ್ ಗ್ರಾಮದಲ್ಲಿ ನಿಧನರಾಗಿದ್ದಾರೆ. ಭಿಲಾರೆ ಗುರೂಜಿ ನೀಡಿರುವ ಸಂದರ್ಶನಗಳು ಸಣ್ಣ ಸಣ್ಣ ಬುಕ್ ಲೆಟ್`ಗಳಾಗಿ ಮುದ್ರಿತವಾಗಿರುವುದು ವಿಶೇಷ.
ಸಂದರ್ಶನವೊಂದರಲ್ಲಿ ಭಿಲಾರೆ ಗುರೂಜಿ ಹೇಳಿರುವ ಪ್ರಕಾರ, ಪಂಚಗನಿಯಲ್ಲಿ ಗಾಂಧೀಜಿಯವರ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಪ್ರತಿಯೊಬ್ಬರಿಗೂ ಅವಕಾಶ ನೀಡಲಾಗಿತ್ತು. ಸಹಚರರಾದ ಉಷಾ ಮೆಹ್ತಾ, ಪ್ಯಾರೆಲಾಲ್, ಅರುಣಾ ಅಸಾಫ್ ಅಲಿ ಮತ್ತಿತರರು ಹಾಜರಿದ್ದರು. ಈ ಸಂದರ್ಭ ಚಾಕು ಹಿಡಿದಿದ್ದ ಗೊಡ್ಸೆ ನನ್ನ ಬಳಿ ಕೆಲ ಪ್ರಶ್ನೆಗಳಿವೆ ಎಂದು ಹೇಳಿ ಗಾಂಧೀಜಿ ಕಡೆಗೆ ನುಗ್ಗಿದ್ದ. ಆದರೆ, ಅವನನ್ನ ನಿಲ್ಲಿಸಿದ ನಾನು ಕೈತಿರುಗಿಸಿ ಚಾಕು ಕಿತ್ತುಕೊಂಡೆ. ಆದರೆ, ಗಾಂಧಿಜಿ ಅವನನ್ನ ಬಿಡಲು ಹೇಳಿದರು ಎಂದಿದ್ಧಾರೆ. ಆದರೆ, ಕಪೂರ್ ಕಮೀಷನ್ ಅಭಿಪ್ರಾಯದ ಪ್ರಕಾರ, 1944ರ ಜುಲೈನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಸಾಬೀತಾಗಿಲ್ಲ ಎನ್ನಲಾಗಿದೆ.
ಮಾಹಿತಿ: ಟೈಮ್ಸ್ ಆಫ್ ಇಂಡಿಯಾ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ