ಶ್ರೀನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಪ್ರಚಾರ ಅಭಿಯಾನದ ಪೋಸ್ಟರ್ ಒಂದರಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ ಮತ್ತು ಪಾಕ್ ಪರ ಹೋರಾಟಗಾರ್ತಿ ಆಸಿಯಾ ಅಂದ್ರಾಬಿ ಫೋಟೋ ಪ್ರತ್ಯಕ್ಷವಾಗಿದೆ.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿದಂತೆ ಸರ್ಕಾರದ ಹಲವು ಗಣ್ಯರು ಇರುವ ಪೋಸ್ಟರ್ ನಲ್ಲಿ ಜೈಲು ಪಾಲಾಗಿರುವ ಪ್ರತ್ಯೇಕತಾವಾದಿ ನಾಯಕಿಯ ಫೋಟೋ ಪ್ರತ್ಯಕ್ಷವಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಅಸಲಿಗೆ ದೇಶಕ್ಕಾಗಿ ಸಾಧನೆ ಮಾಡಿದ ಮಹಿಳೆಯರ ಫೋಟೋ ಇರಬೇಕಾಗಿದ್ದ ಜಾಗದಲ್ಲಿ ದೇಶ ವಿರೋಧಿ ಘೋಷಣೆ ಕೂಗುವ ನಾಯಕಿಯ ಫೋಟೋ ಹಾಕಿರುವುದು ವಿಪರ್ಯಾಸವಾಗಿದೆ. ಈ ವಿಷಯಕ್ಕೆ ಗಮನಕ್ಕೆ ಬಂದ ಮೇಲೆ ಬಿಜೆಪಿ ವಕ್ತಾರ ಸುನಿಲ್ ಸೇಥಿ ತನಿಖೆಗೆ ಒತ್ತಾಯಿಸಿದ್ದು, ಇದಕ್ಕೆ ಕಾರಣವಾದ ಅಧಿಕಾರಿಗಳನ್ನು ಅಮಾನತುಗೊಳಿಸಲು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ