ಜಾಗತಿಕ ಯುವ ಶಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲು ಕಳೆದ 7 ದಿನಗಳಿಂದ ಭಾರತದಲ್ಲಿದ್ದ 19 ಪಾಕ್ ಯುವತಿಯರು ಇಂದು ತವರಿಗೆ ಮರಳಿದರು.
ಸೆಪ್ಟೆಂಬರ್ 27 ರಂದು ಅವರು ಭಾರತಕ್ಕೆ ಆಗಮಿಸಿದ್ದು, ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ಸೀಮಿತ ದಾಳಿ ನಡೆಸಿದ ಬಳಿಕ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕಕ್ಕೀಡಾಗಿದ್ದರು. 19 ಯುವತಿಯರು ದೇಶಕ್ಕೆ ಮರಳುವಂತೆ ಪಾಕ್ ಕೂಡ ಒತ್ತಡ ಹೇರಿತ್ತು. ಹೀಗಾಗಿ ನಿಗದಿತ ಸಮಯಕ್ಕಿಂತ ಮೊದಲೇ ಅವರು ದೇಶಕ್ಕೆ ಹಿಂತಿರುವ ಅನಿವಾರ್ಯತೆ ಬಂದೊದಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಂಚಾಲಕಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತನಾಡಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಸುಷ್ಮಾ ಸ್ವರಾಜ್ ಅವರ ಸುರಕ್ಷಿತ ಮರಳುವಿಕೆಗೆ ವ್ಯವಸ್ಥೆ ಮಾಡುವುದಾಗಿ ವಾಗ್ದಾನ ಮಾಡಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ಭಾರತೀಯ ಉನ್ನತ ಅಧಿಕಾರಿಗಳು ಮಕ್ಕಳ ಸುರಕ್ಷತೆ ಬಗ್ಗೆ ಚಿಂತೆ ಬೇಡ ಎಂದು ಭರವಸೆ ನೀಡಿದ ಮೇಲೆ ಪ್ರವಾಸ ನಿಗದಿಯಂತೆ ಮುಂದುವರೆಯಿತು ಎಂದು ಆಯೋಜಕ ಪ್ರಮೋದ್ ಶರ್ಮಾ ಹೇಳಿದ್ದಾರೆ.
ಮಂಗಳವಾರ ಪಾಕ್ ಹುಡುಗಿಯರು ಮತ್ತು ಪುರುಷ ಸದಸ್ಯರ ನಿಯೋಗ ತಮ್ಮ ತವರಿಗೆ ಮರಳಿತು. ಅವರನ್ನು ಬಸ್‌ನಲ್ಲಿ ಪಾಕಿಸ್ತಾನಕ್ಕೆ ಕಳುಹಿಸಲಾಯಿತು. ವಾಘಾ ಗಡಿ ಮೂಲಕ ಅವರು ಸ್ವದೇಶಕ್ಕೆ ಮರಳಿದರು ಎಂದು ಶರ್ಮಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ