ಬ್ಯಾಂಕ್‌ನಲ್ಲಿ ಹಣ ವಿನಿಮಯ ಸಂದರ್ಭದಲ್ಲಿ ನೀಡಲಾದ ಸ್ಲಿಪ್‌ನಲ್ಲಿ ಪಾವತಿಯ ಉದ್ದೇಶ ಎನ್ನುವ ಕಾಲಂನಲ್ಲಿ ಮೋದಿ ಎಂದು ಹೆಸರು ನಮೂದಿಸಿದ ವಿಚಿತ್ರ ಘಟನೆ ಇದೀಗ ವೈರಲ್ ಆಗಿದೆ.
ರಘು ಒಡೆಯರ್ ಎನ್ನುವ ಗ್ರಾಹಕರೊಬ್ಬರು ಬ್ಯಾಂಕ್‌ನಲ್ಲಿ ಹಣವನ್ನು ಎಕ್ಸ್‌ಚೇಂಜ್ ಮಾಡಲು ಬಂದಿದ್ದರು. ಬ್ಯಾಂಕ್ ಅಧಿಕಾರಿಗಳು ಸ್ಲಿಪ್ ನೀಡಿ ಅದನ್ನು ತುಂಬಿ ಬ್ಯಾಂಕ್‌ಗೆ ಕೊಡುವಂತೆ ಹೇಳಿದ್ದರು. ಬ್ಯಾಂಕ್ ಅಧಿಕಾರಿಗಳು ನೀಡಿದ ಸ್ಲಿಪ್‌ನಲ್ಲಿ ಹಣ ಪಾವತಿಯ ಉದ್ದೇಶ ಎನ್ನುವ ಕಾಲಂನಲ್ಲಿ ಮೋದಿ ಹೆಸರು ಬರೆದು ಅಚ್ಚರಿ ಮೂಡಿಸಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರಘು ಒಡೆಯರ್, 500 ರೂ.1000 ರೂ. ನೋಟುಗಳಿಗೆ ಪ್ರಧಾನಿ ಮೋದಿ ನಿಷೇಧ ಹೇರಿದ್ದರಿಂದ ಅವರ ಹೆಸರನ್ನೇ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ನಾನು ಸಲ್ಲಿಸಿದ ಸ್ಲಿಪ್‌ನ್ನು ಸ್ವೀಕರಿಸಿ ಹಣ ವಿನಿಮಯ ಮಾಡಿಕೊಂಡಿದ್ದಾರೆ ಎಂದು ರಘು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ