ಅತ್ಯಾಚಾರ ಆರೋಪದಲ್ಲಿ 20 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಬಾಬಾ ರಾಮ್ ರಹೀಮ್ ಮತ್ತು ಹನಿಪ್ರೀತ್ಳನ್ನು ನಾನು ನಗ್ನವಾಗಿ ನೋಡಿದ್ದೆ. ಎಂದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಪ್ರೀತ್, ಬಾಬಾರಾಮ್ ರಹೀಮ್ ದತ್ತು ಪುತ್ರಿಯಲ್ಲ. ಅವರಿಬ್ಬರ ನಡುವೆ ಅನೈತಿಕ ಸಂಬಂಧವಿದೆ. ಅವರಿಬ್ಬರು ಬೆಡ್ರೂಮ್ನಲ್ಲಿ ನಗ್ನವಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಸದಾ ಒಂದೇ ಬೆಡ್ನಲ್ಲಿ ಮಲಗುತ್ತಿದ್ದರು ಎಂದು ತಿಳಿಸಿದ್ದಾರೆ.
ಬಾಬಾ ರಾಮ್ ರಹೀಮ್ ಹನಿಪ್ರೀತ್ಳೊಂದಿಗೆ ಸೆಕ್ಸ್ ನಡೆಸಿದ ನಂತರ ಮಗಳು ಎಂದು ಕರೆಯುತ್ತಿದ್ದ. ಹೊರಗಡೆ ಕೂಡಾ ದತ್ತುಪುತ್ರಿ ಎಂದು ಬಿಂಬಿಸುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ.
ಅವರಿಬ್ಬರು ನಗ್ನವಾಗಿರುವುದನ್ನು ನಾನು ನೋಡಿರುವುದನ್ನು ತಿಳಿದ ಬಾಬಾ ರಾಮ್ ರಹೀಮ್, ಯಾರಿಗಾದರೂ ತಿಳಿಸಿದಲ್ಲಿ ಹತ್ಯೆ ಮಾಡುವುದಾಗಿ ನನಗೆ ಜೀವ ಬೆದರಿಕೆ ಹಾಕಿದ್ದ ಎಂದು ಹೇಳಿದ್ದಾರೆ. ಬಾಬಾ ರಾಮ್ ರಹೀಮ್ ಕೆಲ ಬೆಂಬಲಿಗರನ್ನು ನನ್ನ ಹಿಂದೆ ಬಿಟ್ಟಿದ್ದ. ನನ್ನ ಚಲನವಲನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಎಂದರು.
ಗುಹೆಯೊಳಗೆ ಬಿಗ್ಬಾಸ್ ರೀತಿಯಲ್ಲಿ ಸೆಟ್ ನಿರ್ಮಿಸಿದ್ದರು. ಬೆಡ್ರೂಮ್ನೊಳಗೆ ಬಾಬಾ ರಾಮ್ ರಹೀಮ್ ಮತ್ತು ಹನಿಪ್ರೀತ್ ನಗ್ನವಾಗಿ ರಾತ್ರಿ ಪೂರ್ಣ ಸೆಕ್ಸ್ನಲ್ಲಿ ತೊಡಗುತ್ತಿದ್ದರು. ಒಂದು ಬಾರಿ ನಾನು ಗುಹೆಯೊಳಗೆ ಪ್ರವೇಶಿಸಿದಾಗ ಇಬ್ಬರು ನಗ್ನವಾಗಿ ಸೆಕ್ಸ್ನಲ್ಲಿ ತೊಡಗಿದ್ದರು. ನಂತರ ಅವರಿಗೆ ನನ್ನ ಹೆದರಿಕೆಯಿರಲಿಲ್ಲ.ನನಗೆ ಜೀವ ಬೆದರಿಕೆ ಹಾಕಿದರು ಎಂದರು.
ಹನಿಪ್ರೀತ್ ಯಾವತ್ತೂ ನನ್ನ ಜೊತೆ ಬರುತ್ತಲೇ ಇರಲಿಲ್ಲ. ಕೇಳಿದ್ರೆ ಬಾಬಾ ಸೇವೆ ಮಾಡಬೇಕು ಎಂದು ಹೇಳುತ್ತಿದ್ದಳು. ಒತ್ತಾಯ ಮಾಡಿದಾಗ ನನ್ನ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು ಎಂದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.