ಉತ್ತರಪ್ರದೇಶ ಸಮಾಜವಾದಿ ಪಕ್ಷದ ಮುಖಂಡ ನಗರಾಭಿವೃದ್ದಿ ಖಾತೆ ಸಚಿವ ಆಜಂಖಾನ್, ಸಮಾಜವಾದಿ ಪಕ್ಷ ಮುಳುಗುವ ದೋಣಿಯಂತಾಗಿದೆ ಎಂದು ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.
ಕೆಲ ಮುಖಂಡರು ಪಕ್ಷವನ್ನು ತೊರೆಯುತ್ತಿರುವ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಸಮಾಜವಾದಿ ಪಕ್ಷ ಮುಳುಗುವ ದೋಣಿಯಿದ್ದಂತೆ. ದೋಣಿ ಮುಳುಗುವ ಸಂದರ್ಭವಿದ್ದಾಗ ಇಲಿಗಳು ಮೊದಲು ಓಡಲು ಪ್ರಯತ್ನಿಸುತ್ತವೆ ಎಂದು ಲೇವಡಿ ಮಾಡಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ದೊರೆಯುತ್ತದೆಯೋ ಅಥವಾ ಇಲ್ಲವೋ ಎನ್ನುವ ಆತಂಕದಿಂದ ಮುಖಂಡರು ಪಕ್ಷವನ್ನು ತೊರೆಯುತ್ತಿದ್ದಾರೆ. ಇದೇನು ಹೊಸತಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಇದಕ್ಕಿಂತ ಮೊದಲು ಬುಲಂದ್‌ಶಹರ್ ರೇಪ್ ಪ್ರಕರಣ ಕುರಿತಂತೆ ಬೇಜವಾಬ್ದಾರಿ ಹೇಳಿಕೆ ನೀಡಿದ ಉತ್ತರಪ್ರದೇಶ ಸರಕಾರ ಮತ್ತು ಸಚಿವ ಆಜಂಖಾನ್‌ಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ