ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೆ ಹರಿಹಾಯ್ದಿರುವ ಉತ್ತರ ಪ್ರದೇಶದ ಸಚಿವ ಆಜಂ ಖಾನ್ 'ಗುಜರಾತ್ ರಾವಣ'ನನ್ನು ದಹಿಸಿರಿ ಎಂದು ಮೋದಿ ಅವರಿಗೆ ಸಲಹೆ ನೀಡಿದ್ದಾರೆ.
ಸಭೆಯೊಂದರಲ್ಲಿ ಮಾತನ್ನಾಡುತ್ತಿದ್ದ ಆಜಂ ಖಾನ್, ಲಕ್ನೋದಲ್ಲಿ ರಾವಣನನ್ನು ದಹಿಸುವ ಅಗತ್ಯವಿಲ್ಲವೆಂದು ನಾನು ಪ್ರಧಾನಿ ಮೋದಿ ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ. ಭಾರತದ ರಾಜಧಾನಿ ದೆಹಲಿ ಲಕ್ನೋ ಅಲ್ಲ. 1947ರ ಬಳಿಕ ಮಾನವೀಯತೆಯ ಹತ್ಯಾಕಾಂಡ ನಡೆದಿದೆ ಎಂದರೆ ಅದು ಗುಜರಾತ್ನಲ್ಲಿ. ಮೋದಿ ರಾವಣನನ್ನು ದಹಿಸಬೇಕಂದಿದ್ದರೆ ಅದನ್ನವರು ಗುಜರಾತ್ನಲ್ಲಿ ಮಾಡಲಿ ಎಂದು ಅವರು ಹೇಳಿದ್ದಾರೆ.
ಗುಜರಾತ್ ದಂಗೆ ಬಳಿಕವೂ ನಾವು ಮುಸ್ಲಿಮರ ಮತಗಳನ್ನು ಪಡೆದಿದ್ದೇವೆ ಎಂದು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳುತ್ತದೆ. ಆದರೆ ವಾಸ್ತವವಾಗಿ ತಾವು ದಂಗೆಯ ಸಮಯದಲ್ಲಿ ಮಾಡಿದ್ದನ್ನು ಹೇಳಿ ಬೆದರಿಸಿ ಮುಸ್ಲಿಂ ಸಮುದಾಯದವರಿಂದ ಮತ ಪಡೆಯಲಾಯಿತು ಎಂದು ಖಾನ್ ಆರೋಪಿಸಿದ್ದಾರೆ.
ದಸರಾ ನಿಮಿತ್ತ ಲಕ್ನೋದಲ್ಲಿ ನಡೆಯುವ ಐತಿಹಾಸಿಕ ಐಶ್ಭಾಗ್ ರಾಮಲೀಲಾದಲ್ಲಿ ಭಾಗವಹಿಸಲು ಮೋದಿ ಅವರು ಮುಂದಿನ ವಾರ ಲಕ್ನೋಗೆ ಭೇಟಿ ನೀಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ