ಕಳೆದ ಕೆಲ ವರ್ಷಗಳ ಹಿಂದೆ ಚಿಕೂನ್ ಗನ್ಯಾ ರೋಗದಿಂದ ತತ್ತರಿಸಿದ್ದ ದೇಶ ಈಗ ಮೆದುಳು ಜ್ವರಕ್ಕೆ ತುತ್ತಾಗಿದೆ. ಒಡಿಶಾದಲ್ಲಿ ಇದರ ಪ್ರಭಾವ ಹೆಚ್ಚಿದ್ದು ಮಕ್ಕಳ ಮಾರಣಹೋಮ ನಡೆಯುತ್ತಿದೆ. ರಾಜ್ಯದಲ್ಲಿ ಕಳೆದ 34 ದಿನಗಳಲ್ಲಿ ಒಟ್ಟು 50 ಮಕ್ಕಳು ದುರ್ಮರವನ್ನಪ್ಪಿದ್ದಾರೆ. ಕನಿಷ್ಠ 61 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ರಾಜ್ಯಾದ್ಯಂತ ಆತಂಕ ಮನೆಮಾಡಿದೆ.
ಮತ್ತೀಗ ನಿದ್ದೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ರೋಗ ಹರಡದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ.
ಸೊಳ್ಳೆಯಿಂದ ಹರಡುವ ಈ ರೋಗ ಎರಡರಿಂದ 8 ವರ್ಷದೊಳಗಿನ ಮಕ್ಕಳನ್ನು ಹೆಚ್ಚು ಕಾಡುತ್ತದೆ. ಅದರಲ್ಲೂ ಆದಿವಾಸಿಗಳು ಈ ರೋಗದಿಂದ ಹೆಚ್ಚಿನ ಬಾಧೆಗೊಳಗಾಗಿದ್ದಾರೆ.
ರೋಗವನ್ನು ನಿಯಂತ್ರಿಸಲು ಜಿಲ್ಲಾಡಳಿತ ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.
ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ಗಳನ್ನು ತೆರೆಯಲಾಗಿದೆ.
ಈ ರೋಗ ಜಪಾನ್ನಲ್ಲಿ ಮೊದಲು ಕಾಣಿಸಿಕೊಂಡಿದ್ದು ಇದನ್ನು ಜಪಾನೀಸ್ ಎನ್ಸಫಾಲಿಟಿಸ್ ವೈರಸ್ ಎಂದು ಕರೆಯುತ್ತಾರೆ. ಕ್ಯೂಲೆಕ್ಸ್ ಸೊಳ್ಳೆಯಿಂದ ಹರಡುವ ಈ ರೋಗಕ್ಕೆ ಕನ್ನಡದಲ್ಲಿ ಮೆದುಳು ಜ್ವರವೆನ್ನುತ್ತಾರೆ.
ಮಾಲ್ಕನ್ಗಿರಿ ಜಿಲ್ಲೆಯ ಹಳ್ಳಿಗಳಲ್ಲಿ ಈ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ