ಅಸ್ಸಾಂನ ಬಿಜೆಪಿ ಮುಖಂಡ, ಮೊರಿಗಾಂವ್ ಕ್ಷೇತ್ರದ ಶಾಸಕ ರಮಾಕಾಂತ್ ದೇವ್ರಿ ಸೆಕ್ಸ್ ಹಗರಣದಲ್ಲಿ ಸಿಲುಕಿದ್ದಾರೆ. ಖಾಸಗಿ ಹೋಟೆಲ್`ನಲ್ಲಿ ರಮಾಕಾಂತ್ ಮಹಿಖೆ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಡಳಿತಾರೂಢ ಬಿಜೆಪಿಗೆ ಮುಜುಗರ ಟು ಮಾಡಿದೆ.
ಈ ಕುರಿತು, ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡಿರುವ ರಮಾಕಾಂತ್, ನನ್ನ ಮರ್ಯಾದೆ ಕೆಡಿಸಲು ಮಾಡಿರುವ ಸಂಚು ಎಂದು ಆರೋಪಿಸಿದ್ದಾರೆ.
`ಇದು ನನ್ನ ವಿರುದ್ಧ ನಡೆಸಿರುವ ಪೂರ್ವ ಯೋಜಿತ ಸಂಚು. ನನ್ನ ರಾಜಕೀಯ ಭವಿಷ್ಯ ಹಾಳುಗೆಡವಲು ಈ ಸಂಚು ನಡೆದಿದೆ. ಮುಂದಿನ ಸಂಪುಟ ವಿಸ್ತರಣೆ ವೇಲೆ ನನಗೆ ಸಚಿವ ಸ್ಥಾನ ಸಿಗಲಿದೆ. ಅದನ್ನ ತಡೆಯಲು ಈ ತಂತ್ರ ಹೂಡಿದ್ದಾರೆ. ವಿಡಿಯೋ ಸತ್ಯಾಸತ್ಯತೆ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿ’ ಎಂದಿದ್ದಾರೆ.