ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಟೀಕೆಯನ್ನು ಮುಂದುವರೆಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಮೇರಿಕಾ ಅಧ್ಯಕ್ಷನ ಜತೆ ತೆಗೆದುಕೊಳ್ಳುವ ಸೆಲ್ಫಿ ನಮ್ಮ ದೇಶದ ಸಮಸ್ಯೆಗಳನ್ನು ಪರಿಹರಿಸಲು ಯಾವ ಸಹಾಯವನ್ನು ಮಾಡಲಾರದು ಎಂದಿದ್ದಾರೆ.
ಕಳೆದ ಹಲವು ದಿನಗಳಿಂದ ತಾವು ನಡೆಸುತ್ತಿರುವ ಕಿಶಾನ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ಅವರು ಬುಧವಾರ ಸಹಾರಾಣಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನ್ನಾಡುತ್ತ, ಮೋದಿ ದೇಶದೊಳಗೆ ಕಲಹವನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಜನರನ್ನು ಒಂದಾಗಿಸುತ್ತಿದೆ ಎಂದಿದ್ದಾರೆ.
ಮೋದಿ ಬಡವರ ವಿರೋಧಿ ಎಂದು ಬಿಂಬಿಸುವುದನ್ನು ಮುಂದುವರೆಸಿರುವ ಅವರು ಬಡ ಜನರಿಗೆ ಹಣವನ್ನು ನೀಡುವ ಬದಲಾಗಿ ಮೋದಿ ಉದ್ಯಮಪತಿಗಳ 1 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ನಿಮ್ಮ ಸಾಲವನ್ನು ಮನ್ನಾ ಮಾಡಲಾಗುವುದು ಮತ್ತು ವಿದ್ಯುತ್ ಬಿಲ್‌ನ್ನು ಅರ್ಧಕ್ಕಿಳಿಸಲಾಗುವುದು ಎಂದು ರೈತರಿಗೆ ಅವರು ಆಶ್ವಾಸನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ