ದೆಹಲಿ ಮುಖ್ಯಮಂತ್ರಿ, ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಸಹೋದರಿ ಪತಿ ಸುರೇಂದ್ರ ಕುಮಾರ್ ಬನ್ಸಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಲೋಕೋಪಯೋಗಿ ಇಲಾಖೆಗೆ ಬನ್ಸಾಲ್, ನಕಲಿ ಬಿಲ್ ಮತ್ತು ಇನ್ವಾಯ್ಸ್ ಸಲ್ಲಿಸಿದ್ದು, ಭಾರಿ ಲಾಭ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ವಯಂ ಸೇವಾ ಸಂಸ್ಥೆಯೊಂದು ಈ ಆರೋಪವನ್ನು ಮಾಡುತ್ತಿದ್ದು ಔಪಚಾರಿಕವಾಗಿ ದೂರು ದಾಖಲಾಗದಿದ್ದರೂ, ಆರ್ಥಿಕ ಅಪರಾಧಗಳು ವಿಂಗ್ ಪ್ರಾಥಮಿಕ ತನಿಖೆಗೆ ಆದೇಶಿಸಿದೆ.
ಚರಂಡಿ ನಿರ್ಮಾಣದ ಗುತ್ತಿಗೆ ಪಡೆದಿದ್ದ ಬನ್ಸಾಲ್ ಕಾಮಗಾರಿ ಮಾಡಿಸಲು ನಕಲಿ ಕಂಪನಿಗಳನ್ನು ಬಳಸಿದ್ದರು. ಕೇಜ್ರಿವಾಲ್ ಸಹಕಾರ ಅವರಿಗಿದೆ ಎಂದು ರಸ್ತೆ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಆರೋಪಿಸಿದೆ.
ಆದರೆ ಆಮ್ ಆದ್ಮಿ ಪಕ್ಷ ಈ ಆರೋಪವನ್ನು ಅಲ್ಲಗಳೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ