500 ಮತ್ತು 1,000 ರೂಪಾಯಿ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ತೀವ್ರವಾಗಿ ವಿರೋಧಿಸಿದ್ದಾರೆ.
ನೋಟುಗಳ ನಿಷೇಧದ ಹಿಂದೆ ಸದಾಶಯವಿರಬಹುದು. ಆದರೆ ಸರಿಯಾಗಿ ಯೋಜಿಸದೇ ಜಾರಿಗೆ ತಂದಿದ್ದು ತಪ್ಪು. ಬಾವಿಗೆ ಬೀಳುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಸಹ ದಿಟ್ಟ ನಿರ್ಧಾರವೇ ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜೇಟ್ಲಿ ಅವರು ವ್ಯಂಗ್ಯವಾಡಿದ್ದಾರೆ.
ಕಪ್ಪುಹಣವನ್ನು ಯಾರು ಕೂಡ ನಗದು ರೂಪದಲ್ಲಿ ಇಟ್ಟಿರುವುದಿಲ್ಲ. ನೋಟು ನಿಷೇಧದಿಂದ ಕಪ್ಪು ಹಣವನ್ನು ನಿಗ್ರಹಿಸಬಹುದು ಎಂಬ ಸರ್ಕಾರ ಕಲ್ಪನೆಯಲ್ಲಿ ಹುರುಳಿಲ್ಲ. ಕಪ್ಪುಹಣವನ್ನು ವಿದೇಶದಲ್ಲಿ ಇಡಲಾಗುತ್ತದೆ, ಆಸ್ತಿ, ಆಭರಣ, ಸ್ಟಾಕ್ ಮಾರ್ಕೆಟ್ ಅಥವಾ ಬೇರೆ ಇನ್ಯಾವುದೇ ರೂಪದಲ್ಲಿ ವಿದೇಶಗಳಲ್ಲಿ ಗುಪ್ತವಾಗಿಡಲಾಗುತ್ತದೆ ಎಂದು ಅವರ ಅಭಿಪ್ರಾಯ ಪಟ್ಟಿದ್ದಾರೆ.
ಮುಂಬರುವ ಚುನಾವಣೆಗಳಲ್ಲಿ ಇಂತಹ ಮೂರ್ಖ ಪ್ರಧಾನಿಯನ್ನು ದೇಶದ ಜನತೆ ಮತ್ತೆ ಆಯ್ಕೆ ಮಾಡಬಾರದು ಕಳೆದೆರಡು ದಿನಗಳ ಹಿಂದೆ ಅವರು ಹೇಳಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ