ನವದೆಹಲಿ : ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಕೊಲೆ ಮಾಡಿ ಆ ಶವದ ಮೇಲೆ ಅಸ್ವಾಭಾವಿಕ ಲೈಂಗಿಕ ಸಂಬಂಧ ಬೆಳೆಸಿದ ಘಟನೆ ದಕ್ಷಿಣ ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ನಡೆದಿದೆ.
ಇಬ್ಬರು ಯುವಕರು ತಮ್ಮ ಸ್ನೇಹಿತನ ಮನೆಗೆ ಹೋಗಿದ್ದು, ಅಲ್ಲಿ ಮೂವರು ಮದ್ಯಪಾನ ಮಾಡಿದ್ದಾರೆ. ಆ ವೇಳೆ ಅವರ ನಡುವೆ ಜಗಳ ನಡೆದು ಇಬ್ಬರು ಸೇರಿ ತಮ್ಮ ಸ್ನೇಹಿತನ ಕತ್ತು ಹಿಸುಕಿ ಕೊಲೆ ಮಾಡಿ ಆತನ ಶವದ ಜೊತೆ ಅಸ್ವಾಭಾವಿಕ ಲೈಂಗಿಕ ಸಂಬಂಧ ಬೆಳೆಸಿದ್ದಾರೆ. ಬಳಿಕ ಆ ಶವವನ್ನು ಸಾಗಿಸಲು ಮುಂದಾದಾಗ ಮೃತನ ತಂಗಿಯ ಕೈಗೆ ಸಿಕ್ಕಿ ಬಿದಿದ್ದು, ಅಲ್ಲಿಂದ ಪರಾರಿಯಾಗಿ ಬಿಹಾರದ ಪಾಟ್ನಾಕ್ಕೆ ತೆರಳಿದ್ದಾರೆ.
ಈ ಬಗ್ಗೆ ಮೃತನ ತಂಗಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳು ಪಾಟ್ನಾದಲ್ಲಿರುವುದನ್ನು ತಿಳಿದು ಅಲ್ಲಿಗೆ ಹೋಗಿ ಬಂಧಿಸಿದ್ದಾರೆ.