ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಯೂರಿರುವ ಉಗ್ರ ನೆಲೆಗಳನ್ನು ಸರ್ವನಾಶಗೈಯ್ಯಲು ತಮಗೆ ಕೇವಲ 6 ತಿಂಗಳು ಸಾಕು ಎಂದು ಕಾರ್ಯಾಂಗದ ಪ್ರಮುಖರಿಗೆ ಸೇನೆ ತಿಳಿಸಿದೆ.
ಒಂದು ಬಾರಿ ಸೀಮಿತ ದಾಳಿ ನಡೆಸಿ ಉಗ್ರರಿಗೆ ಟಾಂಗ್ ಕೊಟ್ಟಿರುವುದರಿಂದ ಪ್ರಯೋಜನವಿಲ್ಲ. ಇದಷ್ಟೇ ಸಾಲದು. ನಿರಂತರ ಕಾರ್ಯಾಚರಣೆಯ ಮತ್ತೊಂದು ಮಧ್ಯಮಾವಧಿ ಯೋಜನೆ ರೂಪಿಸಬೇಕು. ಜತೆಗೆ ಇದರ ಪರಿಣಾಮಗಳಿಗೂ ಸಿದ್ಧರಾಗಿರಬೇಕು. ಸೀಮಿತ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರರು ಹೊಂಚು ಹಾಕುತ್ತಿದ್ದಾರೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ ಎನ್ನಲಾಗುತ್ತಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 50 ಉಗ್ರರ ಅಡಗುತಾಣಗಳಿದ್ದು ಅವರಿಗೆ ಪಾಕ್ ಸೇನೆಯ ರಕ್ಷಣೆ ಇದೆ.
ಕಳೆದ ತಿಂಗಳು ಉರಿ ಸೇನಾನೆಲೆಯ ಮೇಲೆ ನಡೆದ ಉಗ್ರದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರನೆಲೆಗಳ ಮೇಲೆ ಸೀಮಿತ ದಾಳಿ ನಡೆಸಿದ್ದ ಭಾರತೀಯ ಸೇನೆ 50ಕ್ಕೂ ಹೆಚ್ಚು ಉಗ್ರರ ರುಂಡ ಚೆಂಡಾಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ