Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಮ್ಮುವಿನಲ್ಲಿ ಸೇನಾಧಿಕಾರಿಯನ್ನ ಅಪಹರಿಸಿ ಹತ್ಯೆಗೈದ ಉಗ್ರರು

ಜಮ್ಮುವಿನಲ್ಲಿ ಸೇನಾಧಿಕಾರಿಯನ್ನ ಅಪಹರಿಸಿ ಹತ್ಯೆಗೈದ ಉಗ್ರರು
ಶ್ರೀನಗರ , ಬುಧವಾರ, 10 ಮೇ 2017 (12:05 IST)
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಉಗ್ರರು ಸೇನಾಧಿಕಾರಿಯನ್ನ ಅಪಹರಿಸಿ ಹತ್ಯೆಗೈದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶಾಪಿಯನ್ ಜಿಲ್ಲೆಯಲ್ಲಿ ನಡೆದಿದೆ.

ಹುತಾತ್ಮ ಅಧಿಕಾರಿಯನ್ನ ಲೆಫ್ಟಿನೆಂಟ್ ಉಮಾಜ್ ಫಯಾಜ್ ಪರ್ರಿ ಎಂದು ಗುರ್ತಿಸಲಾಗಿದೆ. ಕಳೆದ ರಾತ್ರಿ ಕುಲ್ಗಾಮ್ ನಿವಾಸದಿಂದ ಅಪಹರಿಸಿರುವ ಉಗ್ರರು ಹತ್ಯೆಗೈದಿದ್ದಾರೆ. ಶಾಪಿಯನ್ ಜಿಲ್ಲೆಯ ಹರ್ಮನ್ ಚೌಕ್ ಬಳಿ ಮೃತದೇಹ ಪತ್ತೆಯಾಗಿದ್ದು, ದೇಹದ ತುಂಬಾ ಗುಂಡುಗಳು ಹೊಕ್ಕಿವೆ.

ಅಕ್ನೂರ್ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯುವ ಅಧಿಕಾರಿ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಪಿಯನ್ ಜಿಲ್ಲೆಯ ಹುಟ್ಟೂರು ಕುಲ್ಗಾಮ್`ಗೆ ತೆರಳಿದ್ದರು. ಘಟನೆಯ ಸಂದರ್ಭ ಆಧರಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾಜಿ ಸಿಎಂ ಓಮರ್ ಅಬ್ದುಲ್ಲಾ ತೀವ್ರವಾಗಿ ಖಂಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಸುವ ಬಗ್ಗೆ ಚರ್ಚೆ ನಡೆದಿದೆ: ಪರರಮೇಶ್ವರ್