ಬೆಂಗಳೂರು: ಕೈಯ್ಯಲ್ಲಿ ಎರಡು, ಮೂರು ಡಿಗ್ರಿ ಇಟ್ಕೊಂಡವರಿಗೆ ಸರಿಯಾಗಿ ಜಾಬ್ ಸಿಗಲ್ಲ. ಅಂತದ್ರಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಓದ್ಕೊಂಡವ್ರಿಗೆ ಎಲ್ಲಿ ಜಾಬ್ ಸಿಗ್ತಾವೆ... ಅನ್ನೋ ಮಾತು ಸಹಜ.
ಆದ್ರೆ, ಅಷ್ಟಕ್ಕೆ ಸುಮ್ಮನಾಗಿ ಕೈ ಕಟ್ಟಿ ಕೂತ್ಕೋಬಾರ್ದು. ಕೆಲಸ ಮಾಡೋವ್ರಿಗೆ ಬೇಕಾದಷ್ಟು ಕೆಲಸಗಳಿವೆ. ಅದ್ಕೆ ನೀವು ಕೂಡಾ ಸ್ವಲ್ಪ ಆಧುನಿಕವಾಗಬೇಕು. ತಂತ್ರಜ್ಞಾನದ ಕಡೆ ಸ್ವಲ್ಪ ಗಮನಹರಿಸಬೇಕು. ಅಂತರ್ಜಾಲವನ್ನು ಜಾಲಾಡಿದ್ರೆ ತಕ್ಕ ಮಟ್ಟಿಗಿನ ಕೆಲಸ ಗಿಟ್ಟಿಸ್ಕೋಬಹುದು. ಅದು ಅಲ್ದೆ, ನಾವು ಊಹೆಯೂ ಮಾಡದೆ ಇರೋ ಕೈ ತುಂಬ ಸಂಬಳ ಪಡೆಯುವ ಕೆಲಸಾನೂ ದೊರಕಬಹುದು. ಅಂತಹ ಅವಕಾಶ ನೀಡುವ ಅತರ್ಜಾಲದ ಒಂದಿಷ್ಟು ವಿಳಾಸ ಇಲ್ಲಿ ನೀಡಿದ್ದೇವೆ. ನಿಮ್ಮ ವಯೋಮಾನ ಹಾಗೂ ಶೈಕ್ಷಣಿಕ ಅರ್ಹತೆಯ ಮೇಲೆ ನೀವು ಅಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಮತ್ತೊಂದು ವಿಷಯ, ಇಲ್ಲಿ ಸರಕಾರಿ ಹುದ್ದೆಗೂ ಅರ್ಜಿ ಸಲ್ಲಿಸುವ ಅಂತರ್ಜಾಲದ ವಿಳಾಸವಿದೆ. ಆಲ್ ದಿ ಬೆಸ್ಟ್....