ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಮಾಜಿ ಡಿಜಿಪಿ ಪರಂಬೀರ್ ಸಿಂಗ್ ಮಾಡಿದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶ ನೀಡುತ್ತಿದ್ದಂತೇ ಅವರು ರಾಜೀನಾಮೆ ನೀಡಿದ್ದಾರೆ.
ಅನಿಲ್ ಅಂಬಾನಿ ಮನೆಗೆ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಪರಂಬೀರ್ ಸಿಂಗ್ ರನ್ನು ವರ್ಗಾವಣೆ ಮಾಡಿದ ವೇಳೆ ಅವರು ಅನಿಲ್ ಅಂಬಾನಿ ಪೊಲೀಸರಿಂದ ಪ್ರತೀ ತಿಂಗಳು 100 ಕೋಟಿ ರೂ. ಸಂಗ್ರಹಿಸಿಕೊಡಲು ಆದೇಶ ನೀಡುತ್ತಿದ್ದರು ಎಂದು ಆರೋಪ ಮಾಡಿದ್ದರು.
ಈ ಸಂಬಂಧ ಅವರು ಮೊದಲು ಆರೋಪ ನಿರಾಕರಿಸಿ, ಪರಂಬೀರ್ ಸಿಂಗ್ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಸಿಬಿಐ ತನಿಖೆಯ ಕುಣಿಕೆ ಬೀಳುತ್ತಿದ್ದಂತೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ದಿಲೀಪ್ ವಲ್ಸೆ ಪಾಟೀಲ್ ನೂತನ ಗೃಹಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ.