Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜನರು ಅಧಿಕಾರಿಗಳಿಗೆ ಕೊಟ್ಟ ಲಂಚದ ಹಣವನ್ನ ವಾಪಸ್ ಕೊಡಿಸುತ್ತೆ ಸರ್ಕಾರ..!

ಜನರು ಅಧಿಕಾರಿಗಳಿಗೆ ಕೊಟ್ಟ ಲಂಚದ ಹಣವನ್ನ ವಾಪಸ್ ಕೊಡಿಸುತ್ತೆ ಸರ್ಕಾರ..!
ಹೈದ್ರಾಬಾದ್ , ಸೋಮವಾರ, 5 ಜೂನ್ 2017 (20:42 IST)
ದೇಶದಲ್ಲಿ ಕರ್ನಾಟಕದ ಬಳಿಕ 2ನೇ ಭ್ರಷ್ಟಾಚಾರ ರಾಜ್ಯ ಎಂಬ ಕುಖ್ಯಾತಿಯನ್ನ ಆಂಧ್ರಪ್ರದೇಶ ರಾಜ್ಯ ಗಳಿಸಿದೆ. ಇದು ಆಡಳಿತಾರೂಢ ಟಿಡಿಪಿ ಸರ್ಕಾರಕ್ಕೆ ಮುಜುಗರವನ್ನುಂಟುಮಾಡಿದೆ. ಈ ಕುಖ್ಯಾತಿಯನ್ನ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪೀಪಲ್ ಫಸ್ಟ್ ಸೇವೆಯನ್ನ ಜಾರಿಗೆ ತಂದಿದ್ದಾರೆ. 

ಯಾವುದೇ ಸರ್ಕಾರಿ ಅಧಿಕಾರಿ ಲಂಚ ಪಡೆದಾಗ, ಲಂಚ ಕೊಟ್ಟ ಗ್ರಾಹಕರು 1100ಗೆ ಕರೆ ಮಾಡಿ ತಮ್ಮ ನೋವನ್ನ ಹೇಳಿಕೊಳ್ಳಬಹುದಾಗಿದೆ.  ಬಳಿಕ ಅಧಿಕಾರಿಗಳೇ ನಿಮ್ಮ ಮನೆಗೆ ಬಂದು ನೀವು ಕೊಟ್ಟ ಲಂಚದ ಹಣ ವಾಪಸ್ ಕೊಡುತ್ತಾರೆ. ಈ ಸೇವೆ ಮೂಲಕ 12 ಮಂದಿ ಸಾರ್ವಜನಿಕರು ತಮ್ಮ ಹಣ ವಾಪಸ್ ಪಡೆದಿದ್ದಾರೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೆಮ್ಮೆಯಿಂದ ಘೋಷಿಸಿದ್ದಾರೆ.

ಈ ನೂತನ ಸೇವೆ ಮೂಲಕ ಶೀಘ್ರ ತಡೆಗಟ್ಟಬಹುದು ಎಂಬುದು ಸರ್ಕಾರದ ನಂಬಿಕೆ. ಇದೇವೇಳೆ, ಲಂಚ ಪಡೆದ ಅಧಿಕಾರಿಗಳ ವಿರುದ್ಧ ದೂರು ನೀಡುವವರ ರಕ್ಷಣೆ ಮಾಡುವುದಾಗಿ ಭರವಸೆ ನೀಡಿರುವ ಸರ್ಕಾರ ಎಲ್ಲ ಪ್ರಕರಣಗಳಲ್ಲೂ ಹಣ ವಾಪಸ್ ಕೊಡಿಸುವುದು ಸಾಧ್ಯವಿಲ್ಲ ಎಂದಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಎಚ್‌.ಡಿ.ಕುಮಾರಸ್ವಾಮಿಯಂತೆ ದುರಂಹಕಾರಿಯಲ್ಲ: ಜನಾರ್ದನ ರೆಡ್ಡಿ