ಅಮ್ಮನ ಆತ್ಮ ನಮ್ಮನ್ನು ಮತ್ತು ರಾಜ್ಯವನ್ನು ಕಾಪಾಡುತ್ತದೆ ಎಂದು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೇಳಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಶಾಂತಿ ಕಾಪಾಡಬೇಕು. ಧರ್ಮಕ್ಕೆ ಸದಾ ಜಯ ದೊರೆಯಲಿದೆ ಎನ್ನುವುದಕ್ಕೆ ಶಶಿಕಲಾ ವಿರುದ್ಧದ ತೀರ್ಪು ಉದಾಹರಣೆಯಾಗಿದೆ ಎಂದರು.
ಅಮ್ಮನ ಆತ್ಮ ನಮಗೆ ಅಡಳಿತ ನಡೆಸುವಲ್ಲಿ ಮಾರ್ಗದರ್ಶನ ನೀಡುತ್ತದೆ. ಇವತ್ತಿಗೂ ಅಮ್ಮನ ಅಡಳಿತವೇ ಜಾರಿಯಲ್ಲಿದೆ. ಅಮ್ಮನ ಜನಪರ ಕಾರ್ಯಗಳು ಎಂದಿನಂತೆ ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.
ಮತ್ತೆ ನಾನು ಮುಖ್ಯಮಂತ್ರಿಯಾಗಲಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತೇನೆ. ನನಗೆ ಬಹುಮತ ದೊರೆಯುವುದು ಖಚಿತ. ಎಲ್ಲರು ಒಗ್ಗಟ್ಟಾಗಿರುವಂತಹ ಸಮಯ ಬಂದಿದೆ ಎಂದು ಎಂದು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಕರೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.