Webdunia - Bharat's app for daily news and videos

Install App

ರಾಜ್ಯಸಭೆಯಲ್ಲಿ ಮೋದಿ, ಜೇಟ್ಲಿಯೊಂದಿಗೆ ಅಮಿತ್ ಷಾ

Webdunia
ಗುರುವಾರ, 14 ಡಿಸೆಂಬರ್ 2017 (18:12 IST)
ಬಿಜೆಪಿ ಅಧ್ಯಕ್ಷರಾದ ಅಮಿತ್ ಷಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲೆ ಅವರ ಜೊತೆಗೆ ರಾಜ್ಯಸಭೆಯಲ್ಲಿ ಮುಂಬದಿಯ ಆಸನಗಳಲ್ಲಿ ಸೇರ್ಪಡೆಗೊಳ್ಳುವ ಮೂಲಕ ರಾಜ್ಯಸಭೆಯಲ್ಲಿನ ಎನ್‌ಡಿಎ ಧ್ವನಿಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿದ್ದಾರೆ.
ಸಂಸತ್ತಿನ ಮೇಲ್ಮನೆಯ ಅಧ್ಯಕ್ಷ ಸ್ಥಾನದಲ್ಲಿದ್ದ ಎಂ ವೆಂಕಯ್ಯ ನಾಯ್ಡು ಅವರು ಹಿರಿಯ ಮುಖಂಡರಾಗಿ ಮುಂದಾಳತ್ವವನ್ನು ವಹಿಸಿದ್ದರು, ಇದೀಗ ಅಮಿತ್ ಷಾ ಅವರು ಆ ಸ್ಥಾನವನ್ನು ಕೈಗೆತ್ತಿಕೊಳ್ಳಲಿದ್ದಾರೆ.
 
ಹೊಸ ಸದಸ್ಯರಿಗೆ ರಾಜ್ಯಸಭಾ ಸಚಿವಾಲಯವು ಆಸನ ವ್ಯವಸ್ಥೆಗಳನ್ನು ನೀಡಿದೆ. ಷಾ ಅವರು ಮುಂಬದಿಯ ಸಾಲಿನಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಅರುಣ್ ಜೇಟ್ಲೆ ಅವರ ಇನ್ನೊಂದು ಬದಿಯಲ್ಲಿ ಆಸೀನರಾಗಲಿದ್ದಾರೆ.
 
ಷಾ ಅವರು ಆಡಳಿತ ಪಕ್ಷದ ಬಲವನ್ನು ಹೆಚ್ಚಿಸಲಿದ್ದಾರೆ. ವಿರೋಧ ಪಕ್ಷದ ಮುಂದಿನ ಸಾಲುಗಳಲ್ಲಿನ ಮೂರು ಪ್ರಮುಖ ನಾಯಕರು ಮತ್ತು ವಾಗ್ಮಿಗಳಾದ ರೆಬೆಲ್ ಜೆಡಿ(ಯು) ಸದಸ್ಯ ಶರದ್ ಯಾದವ್, ಸಿಪಿಐ(ಎಂ) ನ ಸೀತಾರಾಮ್ ಯೆಚೂರಿ ಮತ್ತು ಬಿಎಸ್‌ಪಿಯ ಮಾಯಾವತಿ ಅನುಪಸ್ಥಿತಿಯಲ್ಲಿ ವಿರೋಧ ಪಕ್ಷವು ದುರ್ಬಲವಾಗಲಿದೆ.
 
ಎನ್‌ಡಿಎಗೆ ಸೇರ್ಪಡೆಗೊಳ್ಳುತ್ತಿರುವ ನಿತೀಶ್ ಕುಮಾರ್ ಅವರ ಜೆಡಿ(ಯು), ಅದರ ಸದಸ್ಯರು ವಿರೋಧ ಪಕ್ಷದಿಂದ ಮುಂಬದಿಯ ಆಸನಗಳಿಗೆ ಸ್ಥಳಾಂತರಗೊಳ್ಳಲಿದ್ದಾರೆ. ಯಾದವ್ ಅವರನ್ನು ಇತ್ತೀಚೆಗೆ ಪಕ್ಷದಿಂದ ಹೊರಹಾಕಲಾಗಿತ್ತು ಮತ್ತು ರಾಜ್ಯಸಭಾ ಅಧ್ಯಕ್ಷ ನಾಯ್ಡು ಅವರಿಂದ ಅನರ್ಹಗೊಳಿಸಲಾಗಿತ್ತು. ಜೆಡಿ(ಯು) ನಾಯಕರಾದ ಆರ್‌ಸಿಪಿ ಸಿಂಗ್ ಅವರು ಯಾದವ್ ಅವರ ಮೇಲ್ಮನೆಯಲ್ಲಿ ಪಕ್ಷದ ನಾಯಕರ ಸ್ಥಾನವನ್ನು ತುಂಬಲಿದ್ದಾರೆ.
 
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಯೆಚೂರಿ ಅವರ ಅನುಪಸ್ಥಿತಿಯಲ್ಲಿ ಪ್ರತಿಪಕ್ಷದ ಧ್ವನಿಯು ಅದರ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಯಚೂರಿ ಅವರ ಪಕ್ಷವು ಸಂಸತ್ತಿನಲ್ಲಿ ಮೂರನೇ ಅವಧಿಯನ್ನು ನೀಡುವುದಿಲ್ಲವೆಂದು ನಿರ್ಧರಿಸಿದ ನಂತರ ರಾಜ್ಯಸಭೆಯಲ್ಲಿ ಅವರ ಅಧಿಕಾರಾವಧಿಯು ಅಂತ್ಯಗೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments