ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಾಸವಿದ್ದ ದೆಹಲಿಯ ಕೃಷ್ಣ ಮೆನನ್ ರಸ್ತೆಯ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿಫ್ಟ್ ಆಗಲಿದ್ದಾರೆ.
ಯಾವುದೇ ಮಾಜಿ ಪ್ರಧಾನಿಗಳ ನಿವಾಸವನ್ನು ಸ್ಮಾರಕವಾಗಿಸುವುದಿಲ್ಲ ಎಂದು ಈ ಹಿಂದೆ ಮೋದಿ ಸರ್ಕಾರ ತೀರ್ಮಾನಿಸಿತ್ತು. ಅದರಂತೆ ವಾಜಪೇಯಿ ನಿವಾಸವನ್ನೂ ಸ್ಮಾರಕವಾಗಿಸಿಲ್ಲ.
2004 ರಿಂದ ತಮ್ಮ ಜೀವಿತಾವಧಿಯ ಕೊನೆಯವರೆಗೆ ವಾಜಪೇಯಿ ಇದೇ ನಿವಾಸದಲ್ಲಿದ್ದರು. ಆದರೆ ಅವರ ನಿಧನದ ನಂತರ ಕುಟುಂಬ ವರ್ಗ ಕಳೆದ ನವಂಬರ್ ನಲ್ಲಿ ಈ ನಿವಾಸವನ್ನು ಖಾಲಿ ಮಾಡಿತ್ತು.
ಇದೀಗ ಈ ನಿವಾಸಕ್ಕೆ ಅಮಿತ್ ಶಾ ಭೇಟಿ ನೀಡಿ ಕೆಲವು ನವೀಕರಣ ಮಾಡಲು ಸೂಚಿಸಿದ್ದಾರೆ. ಈ ಮೂಲಕ ಬಿಜೆಪಿ ಮುತ್ಸುದ್ದಿಯ ವಾಸವಿದ್ದ ಮನೆಗೆ ಶಿಫ್ಟ್ ಆಗುವ ಸೂಚನೆ ನೀಡಿದ್ದಾರೆ.