Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೇಜ್ರಿವಾಲ್ ಹೆಸರು ಉಚ್ಛರಿಸೋ ಅರ್ಹತೆ ಶಾಗಿಲ್ಲ: ಆಪ್

ಕೇಜ್ರಿವಾಲ್ ಹೆಸರು ಉಚ್ಛರಿಸೋ ಅರ್ಹತೆ ಶಾಗಿಲ್ಲ: ಆಪ್
ನವದೆಹಲಿ , ಶನಿವಾರ, 8 ಅಕ್ಟೋಬರ್ 2016 (18:21 IST)
ಸೀಮಿತ ದಾಳಿಗೆ ಸಂಬಂಧಿಸಿದಂತೆ ಆಪ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಕಿಡಿಕಾರಿರುವ ಆಪ್,  ಕ್ರಿಮಿನಲ್ ಇತಿಹಾಸ ಹೊಂದಿರುವ ಅಮಿತ್ ಶಾರಿಂದ ದೇಶಭಕ್ತಿ ಪ್ರಮಾಣಪತ್ರ ಬೇಡ ಎಂದು ಹೇಳಿದೆ. 

ಅಮಿತ್ ಶಾ ಅವರ ಅಪರಾಧಿಕ ಇತಿಹಾಸವನ್ನು ಸಂಪೂರ್ಣ ದೇಶ ತಿಳಿದಿದೆ. ಮತ್ತೀಗ ಅವರು ದೇಶಭಕ್ತಿ ಪ್ರಮಾಣಪತ್ರವನ್ನು ನೀಡುತ್ತಿದ್ದಾರೆ. ರಾಷ್ಟ್ರೀಯತೆ ವಿಷಯದಲ್ಲಿ  ಶಾ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಪಕ್ಕದಲ್ಲಿ ನಿಲ್ಲಲು ಸಹ ಅರ್ಹರಲ್ಲ ಎಂದು ಆಪ್ ಕಿಚಾಯಿಸಿದೆ. 
 
ಅಮಿತ್ ಶಾ ರಾಜಕೀಯ ಮೌಲ್ಯಗಳ ಮೇಲೆ ಮೊಡವೆ ಇದ್ದಂತೆ. ಕೇಜ್ರಿವಾಲ್ ಹೆಸರು ಹೇಳುವ ಅರ್ಹತೆ ಕೂಡ ಅವರಿಗಿಲ್ಲ. ಸಂಪೂರ್ಣ ದೇಶಕ್ಕೆ ಅವರ ಕ್ರಿಮಿನಲ್ ಇತಿಹಾಸದ ಬಗ್ಗೆ ಗೊತ್ತು. ಕೊಲೆ ಆರೋಪವನ್ನು ಹೊತ್ತಿದ್ದ ಅವರನ್ನು ಗುಜರಾತಿನಿಂದ ಹೊರ ದಬ್ಬಲಾಯಿತು. ಎಂದು ದೆಹಲಿ ಉಪಮುಖ್ಯಮಂತ್ರಿ, ಆಪ್ ನಾಯಕ ಮನೀಶ್ ಸಿಸೋಡಿಯಾ ಟೀಕಿಸಿದ್ದಾರೆ. 
 
ಅಮಿತ್ ಶಾ ದೇಶಭಕ್ತಿಯ ಪ್ರಮಾಣಪತ್ರವನ್ನು ನೀಡುತ್ತಾರೆನ್ನುವುದು ನನಗೆ ಆಶ್ಚರ್ಯವನ್ನು ತರಿಸಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. 
 
ಅಮಿತ್ ಶಾ ಸೋಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಹತ್ಯೆ ಆರೋಪಗಳನ್ನು ಎದುರಿಸಿದ್ದರು. ನಂತರ ಡಿಸೆಂಬರ್ 30, 2014ರಲ್ಲಿ ಕೋರ್ಟ್ ನಿರಪರಾಧಿ ಎಂದು ಅವರನ್ನು ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಸಚಿವರ ಆಪ್ತ ಕಾರ್ಯದರ್ಶಿ ಅರೆಸ್ಟ್