Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ..?

ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ..?
ಬೆಂಗಳೂರು , ಮಂಗಳವಾರ, 25 ಜುಲೈ 2017 (07:47 IST)
ನವದೆಹಲಿ:ಡೊಕ್ಲಾಮ್ ಗಡಿ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಕುರಿತು ಚೀನಾ ಸುಳಿವು ನೀಡಿದೆ ಎಂದು ತಿಳಿದುಬಂದಿದೆ.
 
ಇದಕ್ಕೆ ಪುಷ್ಟೀ ನೀಡುವಂತೆ ಸಿಕ್ಕಿಂ ಡೊಕ್ಲಾಮ್ ಗಡಿಯಲ್ಲಿ ಸೈನಿಕರ ನಡುವಿನ ಮುಖಾಮುಖಿ ಬಳಿಕ ಸ್ಥಗಿತವಾಗಿದ್ದ ದ್ವಿಪಕ್ಷೀಯ ಮಾತುಕತೆಗೆ ಚೀನಾ ಒಲವು ತೋರಿಸಿದೆ. ಈ ವಾರಾಂತ್ಯದಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಭದ್ರತಾ  ಸಲಹೆಗಾರರ ಸಮಾವೇಶದ ಸಂದರ್ಭದಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಚೀನಿ ವಿದೇಶಾಂಗ  ಕೌನ್ಸಿಲರ್ ಯಾಂಗ್ ಜಿಯೆಚಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಚೀನಾ ಹೇಳಿದೆ.
 
ಬ್ರಿಕ್ಸ್ ಎನ್‌ಎಸ್‌ಎ ಅಧಿಕಾರಿಗಳ ಸಮಾವೇಶ ಇದೇ ಜುಲೈ 27 ಹಾಗೂ 28ರಂದು ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ನಡೆಯಲಿದ್ದು, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಭೆ ನಡೆಯುವ ಸಾಧ್ಯತೆ ಡೊಕ್ಲಾಮ್ ವಿವಾದಕ್ಕೆ ತೆರೆ ಎಳೆಯ್ಯ್ವ ನಿರೀಕ್ಷೆ ಹೆಚ್ಚಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸೆ.21ರಿಂದ ವಿಶ್ವವಿಖ್ಯಾತ ಮೈಸೂರು ದಸರಾ: 30ರಂದು ಜಂಬೂ ಸವಾರಿ