ಹೊಸ ಪಕ್ಷವನ್ನು ಕಟ್ಟಲು ಹೊರಟಿದ್ದಾರೆ ಎಂದು ತಮ್ಮ ಮೇಲೆ ಕೇಳಿ ಬಂದಿರುವ ಆರೋಪವನ್ನು ತಳ್ಳಿ ಹಾಕಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ತಮಗೆ ಅಂತಹ ಉದ್ದೇಶವಿರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಲಕ್ನೋನಲ್ಲಿ ನಡೆಯುತ್ತಿರುವ ಪಕ್ಷದ ವರಿಷ್ಠರ ಸಭೆಯಲ್ಲಿ ಮಾತನ್ನಾಡುತ್ತಿದ್ದ ಅಖಿಲೇಶ್, ತಂದೆಯ ತಮ್ಮ ತಂದೆ ತಮ್ಮ ಮೇಲೆ ಕಿಡಿಕಾರಿದರೂ ಅವರ ವಿರುದ್ಧ ಮಾತನಾಡುವ ಧೈರ್ಯವನ್ನು ತೋರಿಲ್ಲ. ಆದರೆ ಮರಳಿ ಪಕ್ಷ ಸೇರಿರುವ ಅಮರ್ ಸಿಂಗ್ ವಿರುದ್ಧ ಆರೋಪಕ್ಕೆ ಇಳಿದಿದ್ದಾರೆ.
ನಾನು ತಂದೆಯ ಪರವಾಗಿಯೇ ಇರುತ್ತೇನೆ. 25 ವರ್ಷಗಳನ್ನು ಪೂರೈಸಿರುವ ಪಕ್ಷವನ್ನು ಒಡೆದು ಈಗ ಹೊಸ ಪಕ್ಷವನ್ನು ಏಕೆ ಕಟ್ಟಲಿ. ಹೊಸ ಪಕ್ಷವನ್ನು ಕಟ್ಟುವ ಯೋಚನೆಯನ್ನು ಮಾಡಿಯೇ ಇಲ್ಲ. ಪಕ್ಷದಲ್ಲಿ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಮುಲಾಯಂ ಕೇಳಿದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಎಂದೋ ರಾಜೀನಾಮೆ ನೀಡುತ್ತಿದ್ದೆ. ಹೊಸ ಪಕ್ಷ ಕಟ್ಟುವುದು ವದಂತಿ. ಮುಲಾಯಂ ನನ್ನ ತಂದೆ ಅಷ್ಟೇ ಅಲ್ಲ ಗುರು ಸಹ ಭಾವುಕರಾಗಿ ಹೇಳಿದ್ದಾರೆ ಅಖಿಲೇಶ್.
ಜತೆಗೆ ತಾನು ತಂದಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಚುಮಾವಣೆಯನ್ನು ಎದುರಿಸುತ್ತೇನೆ ಎನ್ನುವುದರ ಮೂಲಕ ತಾನೇ ಪಕ್ಷಕ್ಕೆ ಬಾಸ್ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಪಕ್ಷದಲ್ಲಿ ನಡೆಯುತ್ತಿರುವ ಎಲ್ಲ ಭಿನ್ನಾಭಿಪ್ರಾಯ, ಗೊಂದಲಗಳಿಗೆ ಅಮರ್ ಸಿಂಗ್ ಅವರೇ ಕಾರಣ ಎಂದು ಕಿಡಿಕಾರಿದ ಅವರು, ನಾನು ಅಕ್ಟೋಬರ್ ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ಅಮರ್ ಸಿಂಗ್ ಈ ಮೊದಲೇ ಹೇಳಿದ್ದರು. ಬೇಕಾದರೆ ಅವರ ಟ್ವಿಟರ್‌ನ್ನು ಪರಿಶೀಲಿಸಿ ನೋಡಿ. ಅಮರ್ ಸಿಂಗ್ ಹೇಳಿಕೆ ನೋವುಂಟು ಮಾಡಿದೆ ಎಂದು ಸಿಂಗ್ ಮೇಲೆ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.
ಆದರೆ ಮಗನ ವಿರುದ್ಧ ಕಿಡಿಕಾರಿದ ಮುಲಾಯಂ ಸಿಂಗ್ ಯಾದವ್ ತಮ್ಮ ಸಹೋದರ ಶಿವಪಾಲ್ ಸಿಂಗ್ ಮತ್ತು ಅಮರ್ ಸಿಂಗ್ ಪರ ಬ್ಯಾಟ್ ಬೀಸಿದ್ದಾರೆ. ತನ್ನನ್ನು ಜೈಲಿಗೆ ಹೋಗದಂತೆ ರಕ್ಷಿಸಿದ ಅಮರ್ ಸಿಂಗ್ ವಿರುದ್ಧ ಮಾತನಾಡುವ ಯೋಗ್ಯತೆ ನಿನಗೇನಿದೆ ಎಂದು ಅವರು ಮಗನ ಮೇಲೆ ಹರಿಹಾಯ್ದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಬದಲಾವಣೆ ತರುವವರನ್ನು ಮುಂದಕ್ಕೆ ಕರೆದುಕೊಂಡು ಬಂದೆ. ಅಧಿಕಾರ ಸಿಗುತ್ತಲೇ ನಿಮ್ಮ ತಲೆ ಕೆಟ್ಟು ಹೋಗಿದೆ. ಕಿರುಚಾಡೋರನ್ನ ಪಕ್ಷದಿಂದ ಹೊರಕ್ಕೆ ಹಾಕ್ತಿನಿ ಎಂದು ಮುಲಾಯಂ ಗುಡುಗಿದ್ದಾರೆ.