ಪಾಟ್ನಾ: ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರೀ ದೇವಿ ಪುತ್ರ ತೇಜ್ ಪಾಲ್ ಯಾದವ್ ವಿವಾಹ ನಿಶ್ಚಯವಾಗಿದ್ದು ಹುಡುಗಿ ಯಾರು ಗೊತ್ತೇ? ಐಶ್ವರ್ಯಾ ರೈ!!
ಅರೇ.. ಐಶ್ವರ್ಯಾ ಅದಾಗಲೇ ಬಚ್ಚನ್ ಬಹು ಆಗಿ ಮುದ್ದಿನ ಮಗಳು, ಪತಿ ಜತೆ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇವರಿಗೇಕೆ ಬಂತು ಇಂತಹಾ ಬುದ್ಧಿ ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ತೇಜ್ ಪಾಲ್ ವಿವಾಹವಾಗುತ್ತಿರುವ ಐಶ್ವರ್ಯಾ ರೈ, ಬಚ್ಚನ್ ಬಹು ಅಲ್ಲ!
ತೇಜ್ ಪಾಲ್ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗಿ ಹೆಸರು ಐಶ್ವರ್ಯಾ ರೈ. ಈಕೆ ಪಾಟ್ನಾ ಮೂಲದವಳು. ಚಂದ್ರಿಕಾ ಪ್ರಸಾದ್ ರೈ ಎಂಬವರ ಪುತ್ರಿ. ಮೇ 12 ರಂದು ಈ ವಿವಾಹ ಸಮಾರಂಭ ನಡೆಯಲಿದ್ದು, ವಿವಾಹಕ್ಕೆ ರಾಜಕೀಯ ಕ್ಷೇತ್ರದ ಘಟಾನುಘಟಿಗಳು ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ರಾಬ್ರೀ ದೇವಿ ಮದುವೆಯ ತಯಾರಿಯಲ್ಲಿ ತೊಡಗಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.