ವಿಮಾನ ಪ್ರಯಾಣಿಕರಿಗೆ ಉಪಚರಿಸುತ್ತಾ ಕೈ ತುಂಬಾ ಸಂಬಳವನ್ನು ಎಣಿಸುತ್ತಿದ್ದ ಗಗನಸಖಿಯರಿಗೆ ಏರ್ ಇಂಡಿಯಾ ಶಾಕ್ ನೀಡಿದೆ. ದಢೂತಿ ದೇಹ ಹೊಂದಿರುವ ಗಗನಸಖಿಯರಿಗೆ ಏರ್ ಇಂಡಿಯಾ ಕೋಕ್ ನೀಡಿದ್ದು ಕಚೇರಿ ಕೆಲಸಕ್ಕೆ ವರ್ಗಾಯಿಸಿದೆ.
ಸ್ಥೂಲಕಾಯ ಹೊಂದಿರುವ ಒಟ್ಟು 57 ಗಂಗನಸಖಿಯರಿಗೆ ಈ ಆದೇಶ ನೀಡಲಾಗಿದ್ದು, ತೂಕವನ್ನು ಇಳಿಸಿಕೊಂಡರೆ ಮಾತ್ರ ಮತ್ತೆ ಗಗನಸಖಿಯರಾಗಿ ನೇಮಿಸುತ್ತೇವೆ ಎಂದು ತಾಕೀತು ಮಾಡಿದೆ.
ಕೈ ತುಂಬಾ ಸಂಬಳ ಮತ್ತು ಹೆಚ್ಚುವರಿ ಭತ್ಯೆಗಳನ್ನು ಪಡೆಯುತ್ತಿದ್ದ ಗಗನಸಖಿಯರು ಏಕಾಏಕಿ ನೀಡಿದ ಆದೇಶದಿಂದ ಬೆಸ್ತು ಬಿದ್ದಿದ್ದಾರೆ.
ಕ್ಯಾಬಿನ್ ಸಿಬ್ಬಂದಿಗೂ ತೂಕವನ್ನಿಳಿಸಿಕೊಳ್ಳಲು ಸಮಯದ ಗಡುವು ನೀಡಲಾಗಿದೆ. ಇಲ್ಲದಿದ್ದರೆ ಅವರನ್ನು ಸಹ ಕಚೇರಿ ಕೆಲಸಕ್ಕೆ ನೇಮಿಸುವ ಎಚ್ಚರಿಕೆ ನೀಡಲಾಗಿದೆ.