Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಏರ್ ಇಂಡಿಯಾ ಪೈಲಟ್‌ನ ಮೂಡ್ ಏರುಪೇರು: ಅಪಾಯಕ್ಕೆ ಸಿಲುಕಿದ 200 ಮಂದಿಯ ಜೀವ

ಏರ್ ಇಂಡಿಯಾ ಪೈಲಟ್‌ನ ಮೂಡ್ ಏರುಪೇರು: ಅಪಾಯಕ್ಕೆ ಸಿಲುಕಿದ 200 ಮಂದಿಯ ಜೀವ
ನವದೆಹಲಿ , ಶನಿವಾರ, 3 ಸೆಪ್ಟಂಬರ್ 2016 (13:09 IST)
ಏರ್‌ ಇಂಡಿಯಾದ ಹಿರಿಯ ಪೈಲಟ್ ಮನಸ್ಥಿತಿಯ ಏರುಪೇರಿನಿಂದಾಗಿ ಏ.28ರಂದು ದೆಹಲಿ-ಪ್ಯಾರಿಸ್ ಫ್ಲೈಟ್‌ನಲ್ಲಿ ಅಸುರಕ್ಷಿತ ಚಾಲನೆ ಮಾಡಿ 200 ಮಂದಿ ಪ್ರಯಾಣಿಕರ ಜೀವವನ್ನು ಅಪಾಯಕ್ಕೊಡಿದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೈಲಟ್ ಅವರನ್ನು ವಜಾ ಮಾಡಲಾಗಿದ್ದು, ವಿಮಾನಯಾನ ನಿಯಂತ್ರಕ ಡಿಜಿಸಿಎ ಈ ಪ್ರಕರಣ ಕುರಿತು ತನಿಖೆ ಆರಂಭಿಸಿದ್ದಾರೆ.

ಫ್ಲೈಟ್ ಕಮಾಂಡರ್ ಬೋಯಿಂಗ್ 787 ವಿಮಾನವನ್ನು ನಿಗದಿತ ಅಂಗೀಕಾರ್ಹ ಸುರಕ್ಷಿತಾ ಮಟ್ಟವನ್ನು ಮೀರಿ ಅಧಿಕ ಎತ್ತರಕ್ಕೆ ಒಯ್ದಿದ್ದರಿಂದ ವಿಮಾನದ ಸುರಕ್ಷತೆ ಕುರಿತು ಗಂಭೀರ ಆತಂಕ ಕವಿದಿತ್ತು.
 
ಮೂಲಗಳ ಪ್ರಕಾರ, ಪೈಲಟ್ ತೀವ್ರ ನಡವಳಿಕೆ ಸಮಸ್ಯೆಗಳಿಗೆ ಹಾಗೂ ಮನಸ್ಥಿತಿಯ ಏರುಪೇರಿಗೆ ಒಳಗಾಗುತ್ತಿದ್ದು, ಮುಂಚಿನ ಕೆಲವು ಸಂದರ್ಭಗಳಲ್ಲಿ ಕೂಡ ಪೈಲಟ್ ಕಳವಳದ ಲಕ್ಷಣಗಳನ್ನು ತೋರಿಸಿದ್ದರು.
 
ಆನ್‌ಬೋರ್ಡ್ ಫ್ಲೈಟ್ ಸಾಫ್ಟ್‌ವೇರ್ ತಿದ್ದಿದ ಪೈಲಟ್ ವಿಮಾನವನ್ನು ನಿಯಂತ್ರಣ ತಪ್ಪಿಹೋಗುವ ಸಾಧ್ಯತೆಯಿರುವ ಎತ್ತರಕ್ಕೆ ಒಯ್ದಿದ್ದರು. ಅಸಹಜ ಹಾರಾಟ ಪ್ರಕ್ರಿಯೆಯನ್ನು ಗಮನಿಸಿದ ಸಹ ಪೈಲಟ್ ವಿಮಾನವನ್ನು ಮಾಮೂಲಿ ಎತ್ತರಕ್ಕೆ ಕಮಾಂಡರ್ ತರುವಂತೆ ಮಾಡಿದ್ದರೆಂದು ಮೂಲಗಳು ತಿಳಿಸಿವೆ.
 
ತನಿಖೆ ಪ್ರಗತಿಯಲ್ಲಿರುವಂತೆ, ಏರ್ ಇಂಡಿಯಾ ಪೈಲಟ್ ಪ್ರಕರಣವು ಮಾನಸಿಕ ಸ್ಥಿತಿಗತಿಯ ವಿಷಯವಾದ್ದರಿಂದ ವೈದ್ಯಕೀಯ ಮಂಡಳಿಗೆ ಉಲ್ಲೇಖಿಸಿತು. ಪೈಲಟ್ ಅವರಿಗೆ ವಿಸ್ತೃತ ಮಾನಸಿಕ ಪರಿಶೀಲನೆಗಳಿಗೆ ಒಳಪಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಮನೆ ಮೇಲೆ ಸಿಬಿಐ ದಾಳಿ