ಜಯಲಲಿತಾ ನಿಧನದ ಬಳಿಕ ದಿನಕ್ಕೊಂದು ವಿವಾದದ ಮೂಲಕ ಸುದ್ದಿಯಾಗುತ್ತಿರುವ ತಮಿಳುನಾಡಿನ ಣ್ಣಾಡಿಎಂಕೆ ಪಕ್ಷದಲ್ಲಿ ಇವತ್ತು ಮತ್ತೊಂದು ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ.
ಸಿಎಂ ಎಡಪ್ಪಾಡ ಪಳನಿಸ್ವಾಮಿ ಅಣ್ಣಾಡಿಎಂಕೆಯ ಜನರಲ್ ಕೌನ್ಸಿಲ್ ಸಭೆ ಕರೆದಿದ್ದಾರೆ. ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ್ಣ ಒಗ್ಗೂಡಿದ ಬಳಿಕ ನಡೆಯುತ್ತಿರುವ ಸಾಮಾನ್ಯ ಸಭೆ ಇದಾಗಿದ್ದು, ವಿಲೀನ ಒಪ್ಪಂದದಂತೆ ಪಕ್ಷದಿಂದ ಶಶಿಕಲಾ ಅವರನ್ನ ಉಚ್ಚಾಟಿಸುವ ಸಾಧ್ಯತೆ ಇದೆ. ಹೀಗಾಗಿ, ಪಕ್ಷದಲ್ಲಿ ಮೂಲೆಗುಂಪಾಗಿರುವ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಸಭೆ ರದ್ದು ಮಾಡಲು ಇನ್ನಿಲ್ಲದಂತೆ ಕಸರತ್ತು ನಡೆಸಿದ್ಧಾರೆ. ಈ ಮಧ್ಯೆ, ಸಿಎಂ ಪಳನಿಸ್ವಾಮಿ ಕರೆದಿರುವ ಕೌನ್ಸಿಲ್ ಸಭೆ ಕಾನೂನು ಬಾಹಿರವಾದದ್ದು, ಜನರಲ್ ಕೌನ್ಸಿಲ್ ಸಭೆ ಕರೆಯುವ ಅಧಿಕಾರ ಇರುವುದು ಪ್ರಧಾನ ಕಾರ್ಯರರ್ಶಿಗೆ ಮಾತ್ರ. ಹೀಗಾಗಿ, ಸಭೆ ರದ್ದು ಆದೇಶ ನೀಡಬೇಕೆಂದು ದಿನಕರನ್ ಆಪ್ತ ವೆಟ್ರಿವೇಲ್ ಸಲ್ಲಿಸಿದ್ದ ಅರ್ಜಿಯನ್ನ ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ. ಜೊತೆಗೆ ಅನುಮತಿ ಪಡೆಯದೇ ಅರ್ಜಿ ಸಲ್ಲಿಸಿದ್ದರಿಂದ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈಗಾಗಲೇ ಪಳನಿಸ್ವಾಮಿ ಕರೆದಿರುವ ಜನರಲ್ ಕೌನ್ಸಿಲ್ ಸಭೆಗೆ ರಾಜ್ಯದ ವಿವಿಧೆಡೆಗಳಿಂದ ಮುಖಂಡರು ಚೆನ್ನೈಗೆ ಆಗಮಿಸಿದ್ದಾರೆ. ಸಿಎಂ ಪಳನಿಸ್ವಾಮಿ, ಡಿಸಿಎಂ ಪನ್ನೀರ್ ಸೆಲ್ವಂ ಬಣದ ಸದಸ್ಯರೂ ಆಗಮಿಸಿದ್ದಾರೆ. ಪಕ್ಷದ 3000 ಸದಸ್ಯರು ಭಾಗವಹಿಸುತ್ತಿದ್ದು, ಟಿಟಿವಿ ದಿನಕರನ್ ಮತ್ತವರ ಬಣ ಗೈರಾಗುವ ಎಲ್ಲ ಸಾಧ್ಯತೆ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ