Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಕ್ಷದ ಸೋಲಿಗೆ ಹೊಣೆ ಹೊತ್ತು ರಾಜೀನಾಮೆ: ರಾಹುಲ್ ಗಾಂಧಿ

ಪಕ್ಷದ ಸೋಲಿಗೆ ಹೊಣೆ ಹೊತ್ತು ರಾಜೀನಾಮೆ: ರಾಹುಲ್ ಗಾಂಧಿ
ನವದೆಹಲಿ , ಬುಧವಾರ, 3 ಜುಲೈ 2019 (17:17 IST)
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆಯುವ ಉಹಾಪೋಗಳನ್ನು ತಳ್ಳಿಹಾಕಿದ ರಾಹುಲ್ ಗಾಂಧಿ, ಪಕ್ಷದ ಸೋಲಿಗೆ ಹೊಣೆಗಾರಿಕೆ ಹೊರುವುದು ಅನಿವಾರ್ಯವಾಗಿದೆ. ಆದ್ದರಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. 
ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಅವರ ನಿವಾಸದ ಮುಂದೆ ಪ್ರತಿಭಟನೆ ಆರಂಭಿಸಿದ್ದರು. ಇದೀಗ ರಾಜೀನಾಮೆ ಬೆಳವಣಿಗೆಗಳಿಗೆ ತೆರೆ ಬಿದ್ದಂತಾಗಿದೆ.
 
ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಅನುಭವಿಸಿದ ನಷ್ಟಕ್ಕೆ ಜನರು ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು.ನಾನು ಸೋಲಿನ ಜವಾಬ್ದಾರಿಯನ್ನು ಅವರು ತೆಗೆದುಕೊಳ್ಳದಿದ್ದರೆ ಅದು ತಪ್ಪಾಗುತ್ತದೆ. ಪಕ್ಷವನ್ನು ಪುನರ್ನಿರ್ಮಿಸಲು ಕಠಿಣ ನಿರ್ಧಾರಗಳು ಬೇಕಾಗುತ್ತವೆ ಮತ್ತು 2019 ರ ವೈಫಲ್ಯಕ್ಕೆ ಹಲವಾರು ಮುಖಂಡರನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ.ಪಕ್ಷದ ಅಧ್ಯಕ್ಷನಾಗಿ ನಾನು ಹೊಣೆಗಾರಿಕೆ ವಹಿಸಿಕೊಳ್ಳದಿದ್ದರೆ ಬೇರೆಯವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಅನ್ಯಾಯವಾಗುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
 
ಲೋಕಸಭೆ ಚುನಾವಣೆ ನಡೆಸಿದ ರೀತಿಯ ಬಗ್ಗೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ದೇಶದ ಸಂಸ್ಥೆಗಳ ತಟಸ್ಥತೆಯ ಅಗತ್ಯವಿರುತ್ತದೆ. ಮುಕ್ತ ಪತ್ರಿಕೆ ವ್ಯವಸ್ಥೆ, ಸ್ವತಂತ್ರ ನ್ಯಾಯಾಂಗ ಮತ್ತು ಪಾರದರ್ಶಕ ಚುನಾವಣಾ ಆಯೋಗವು ವಸ್ತುನಿಷ್ಠ ಮತ್ತು ತಟಸ್ಥವಾಗಿದ್ದಲ್ಲಿ ಪಾರದರ್ಶಕ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

2019 ರ ಚುನಾವಣೆಯಲ್ಲಿ ನಾವು ರಾಜಕೀಯ ಪಕ್ಷದ ವಿರುದ್ಧ ಹೋರಾಡಲಿಲ್ಲ. ಬದಲಿಗೆ, ನಾವು ದೇಶದ ಸಂಸ್ಥೆಗಳ ವಿರುದ್ಧ ಹೋರಾಟ ಮಾಡಬೇಕಾಯಿತು, ಅದರಲ್ಲಿ ಪ್ರತಿಯೊಂದು ಸಂಸ್ಥೆಯು ಪ್ರತಿಪಕ್ಷಗಳ ವಿರುದ್ಧ ಅಕ್ರಮವೆಸಗಲು ಸಿದ್ದವಾಗಿತ್ತು. ದೇಶದಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಲ್ಲ ಎನ್ನುವುದು ಇದೀಗ ಸಾಬೀತಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಡವರ ಮನೆ ಶ್ರೀಮಂತರ ಪಾಲು; RTI ನಿಂದ ಹೊರಬಿತ್ತು ಭಯಂಕರ ಸತ್ಯ