ನವದೆಹಲಿ : ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಕ್ಕೂ ಮಾನ್ಯತೆ ನೀಡುವಂತೆ ಸಲಿಂಗಕಾಮಿ ದಂಪತಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಇಂದು ಮುಖ್ಯ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ-ಸದಸ್ಯ ಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಹೈದರಾಬಾದ್ ಮೂಲದ ಸಲಿಂಗಕಾಮಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡ್ಯಾಂಗ್ ಈ ಅರ್ಜಿ ಸಲ್ಲಿಸಿದ್ದು,
ಒಬ್ಬರ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಐಉಃಖಿಕಿ+ ನಾಗರಿಕರಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.
10 ವರ್ಷದ ಹಿಂದೆ ಅಧಿಕೃತ ಮದುವೆ ನಡೆದಿದ್ದರು ಈವರೆಗೂ ಅವರು ವಿವಾಹಿತ ದಂಪತಿ ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ದಂಪತಿ ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಕೋರ್ಟ್ ಹೇಗೆ ರಕ್ಷಿಸುತ್ತದೆಯೋ ಅದರಂತೆ ಸಲಿಂಗ ವಿವಾಹವು ಈ ಸಾಂವಿಧಾನಿಕವಾಗಿ ಅಧಿಕೃತಗೊಳಿಸಲು ಮನವಿ ಮಾಡಿದೆ.