ನವದೆಹಲಿ : ಸಿಬಿಐ ವಿಶೇಷ ನ್ಯಾಯಾಲಯ ಆಪ್ ನಾಯಕ, ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 7 ದಿನಗಳ ಸಿಬಿಐ ಕಸ್ಟಡಿ ಅಂತ್ಯವಾದ ಹಿನ್ನೆಲೆ ಮಾರ್ಚ್ 20ರ ವರೆಗೂ ನ್ಯಾಯಂಗ ಬಂಧನಕ್ಕೆ ನೀಡಲಾಗಿದೆ.
ದೆಹಲಿಯ ಹೊಸ ಮದ್ಯ ನೀತಿ ಹರಗಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. 7 ದಿನಗಳ ವಿಚಾರಣೆ ನಡೆಸಿದ ಅಧಿಕಾರಿಗಳು ಸೋಮವಾರ ಅವರ ವಿಚಾರಣೆ ಅಗತ್ಯ ಇಲ್ಲ, ಮುಂದೆ ಅಗತ್ಯ ಬಿದ್ದಲ್ಲಿ ಕೋರ್ಟ್ ಮೂಲಕ ಕಸ್ಟಡಿ ಪಡೆಯುವುದಾಗಿ ಸಿಬಿಐ ಪರ ವಕೀಲರು ನ್ಯಾಯಲಯಕ್ಕೆ ಹೇಳಿದರು.
ಇಡೀ ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದರಿಂದ ಸಾಕ್ಷ್ಯಗಳು ಭಯಗೊಂಡಿವೆ ಎಂದು ಕೋರ್ಟ್ಗೆ ತಿಳಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಸಿಸೋಡಿಯಾ ಪರ ವಕೀಲರು, ಮಾಧ್ಯಮಗಳಿಗ ಸಿಬಿಐ ಅಧಿಕಾರಿಗಳು ಹೆದರುತ್ತಾರೆಯೇ ಎಂದು ಪ್ರಶ್ನಿಸಿದರು.
ಮಾಧ್ಯಮಗಳು ವರದಿ ಮಾಡುತ್ತವೆ. ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ಮಾಡುವವರೆಗೂ ನ್ಯಾಯಾಲಯ ಈ ಬಗ್ಗೆ ಚಿಂತಿಸುವುದಿಲ್ಲ ಎಂದು ನ್ಯಾಯಧೀಶರು ಹೇಳಿದರು.