ನವದೆಹಲಿ : ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಅತ್ಯಾಚಾರ ಎಸಗಿದ ಘಟನೆ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ಪ್ರವೀಣ್ ಬಾಲಾ ( 25 ವರ್ಷ) ಎಂಬಾತ ಎಚ್ಎಎಲ್ ಬಳಿ ಇರುವ ದೊಡ್ಡ ನೆಕ್ಕುಂದಿಯ ತನ್ನ ಮನೆಗೆ ತನ್ನ ಮಾಜಿ ಪ್ರೇಯಸಿಯನ್ನು ಕರೆಸಿಕೊಂಡು ಇಂತಹ ದುಷ್ಕೃತ್ಯ ಎಸಗಿದ್ದಾನೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಇತ ತನ್ನ ಜೊತೆ ಕೆಲಸ ಮಾಡುತ್ತಿರುವ ದೆಹಲಿ ಮೂಲದ ಯುವತಿಯ ಜೊತೆ ಸ್ನೇಹ ಬೆಳಸಿಕೊಂಡಿದ್ದ. ಮಾತ್ರವಲ್ಲ, ಇಬ್ಬರೂ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು.
ಆದರೆ ಇತ್ತೀಚೆಗೆ ಆರು ತಿಂಗಳ ಹಿಂದೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಪ್ರತ್ಯೇಕವಾಗಿ ನೆಲೆಸಲು ನಿರ್ಧರಿಸಿದ್ದರು. ನಂತರ ಯುವತಿ ಪಿಜಿಯೊಂದಕ್ಕೆ ತನ್ನ ವಾಸಸ್ಥಳ ಬದಲಿಸಿದ ಬಳಿಕವೂ ಇಬ್ಬರ ನಡುವೆ ಸ್ನೇಹ ಮುಂದುವರಿದಿತ್ತು. ಆದರೆ ಪಾರ್ಸಲ್ ಬಂದಿದೆ ಎಂದು ಸುಳ್ಳು ಹೇಳಿ ತನ್ನ ಮಾಜಿ ಪ್ರೇಯಸಿಯನ್ನು ಮನೆಗೆ ಕರೆಸಿಕೊಂಡ ಆತ ಬೆಡ್ ರೂಮ್ ಗೆ ಕರೆದೊಯ್ದು, ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ.
ಈ ಬಗ್ಗೆ ಯುವತಿ ಎಚ್ಎಎಲ್ ಪೊಲೀಸರಿಗೆ ನೀಡಿದ ದೂರು ನೀಡಿದ್ದು, ಐಪಿಸಿ ಸೆಕ್ಷನ್ 376 ಹಾಗೂ 506 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.