Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ಜನ್ಮ ನೀಡಿದ ಕೆಲವೇ ನಿಮಿಷದಲ್ಲಿ ಮಗುವನ್ನು ಮಾರಿದ ತಾಯಿ!

ಹಣಕ್ಕಾಗಿ ಜನ್ಮ ನೀಡಿದ ಕೆಲವೇ ನಿಮಿಷದಲ್ಲಿ ಮಗುವನ್ನು ಮಾರಿದ ತಾಯಿ!
ರಾಂಚಿ , ಶನಿವಾರ, 25 ಮಾರ್ಚ್ 2023 (10:41 IST)
ರಾಂಚಿ : ಮಹಿಳೆಯೊಬ್ಬಳು 4.5 ಲಕ್ಷ ರೂ. ಹಣದ ಆಸೆಗೆ ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಮಾರಾಟ ಮಾಡಿರುವ ಘಟನೆ ಜಾರ್ಖಂಡ್ನ ಛತ್ರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಮಗುವಿನ ತಾಯಿ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ.
 
ನವಜಾತ ಶಿಶುವನ್ನು ಮಾರಾಟ ಮಾಡಿದ ಮಹಿಳೆಯನ್ನು ಆಶಾ ದೇವಿ ಎಂದು ಗುರುತಿಸಲಾಗಿದೆ. ಆಕೆಗೆ ಹುಟ್ಟಿದ ಗಂಡು ಮಗುವನ್ನು 4.5 ಲಕ್ಷ ರೂ.ಗಾಗಿ ಮಾರಾಟ ಮಾಡಿದ್ದಾಳೆ. ಘಟನೆ ಬಗ್ಗೆ ವೈದ್ಯರೊಬ್ಬರಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಕೇವಲ 24 ಗಂಟೆಗಳೊಳಗಾಗಿ ಮಗುವನ್ನು ರಕ್ಷಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅವಿನಾಶ್ ಕುಮಾರ್, ಆಶಾ ದೇವಿಯಿಂದ 1 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಾಗಿದೆ ಎಂದು ತಿಳಿಸಿದ್ದಾರೆ. ಮೊದಲಿಗೆ ಮಗುವಿನ ತಾಯಿಯನ್ನು ಬಂಧಿಸಲಾಗಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಮಗುವನ್ನು ಡಿಂಪಲ್ ದೇವಿ ಎಂಬವರಿಗೆ ಮಾರಿರುವುದಾಗಿ ತಿಳಿಸಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ