ಮಧ್ಯಪ್ರದೇಶ : ರೈತನೊಬ್ಬ ಲಂಚ ಕೇಳಿದ ತಹಶೀಲ್ದಾರನ ಜೀಪ್ ಗೆ ಎಮ್ಮೆಯನ್ನು ಕಟ್ಟಿ ಪ್ರತಿಭಟನೆ ನಡೆಸಿರುವ ಘಟನೆ ಮಧ್ಯಪ್ರದೇಶದ ಟಿಕಾಮಗಢದಲ್ಲಿ ನಡೆದಿದೆ.
ರೈತನೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಜಮೀನು ಖರೀದಿಸಿದ್ದು, ಅದನ್ನು ತನ್ನ ಮಕ್ಕಳ ಹೆಸರಿಗೆ ಪರಿವರ್ತಿಸಲು ಅದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನೂ ತೆಗೆದುಕೊಂಡು, ಟಿಕಾಮಗಢ ತಹಶೀಲ್ದಾರ್ ಬಳಿಗೆ ಹೋಗಿದ್ದಾರೆ.
ಆದರೆ ತಹಶೀಲ್ದಾರ್ ಈ ಕೆಲಸ ಮಾಡಿಕೊಡಲು ರೈತನ ಬಳಿ 1 ಲಕ್ಷ ರೂ. ಲಂಚ ಕೇಳಿದ್ದಾನೆ. ಇದರಿಂದ ಕೋಪಗೊಂಡ ರೈತ ತನ್ನ ಎಮ್ಮೆಯನ್ನು ಕಚೇರಿಯ ಬಳಿ ನಿಂತಿದ್ದ ತಹಶೀಲ್ದಾರ್ ನ ಜೀಪ್ ಗೆ ಕಟ್ಟಿ ಹಾಕಿ ಪ್ರತಿಭಟನೆ ನಡೆಸಿದ್ದಾನೆ. ಅಷ್ಠೇ ಅಲ್ಲದೇ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗೀಯ ಅಧಿಕಾರಿಗಳಿಗೂ ಮನವಿ ಮಾಡಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.