ಭೋಪಾಲ್ : ಕೇಂದ್ರ ಸರ್ಕಾರದ ಯೋಜನೆಗಳನ್ನು ಟೀಕಿಸಲು ಹೋಗಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಜೀತೂ ಪಟವಾರಿ ವಿವಾದಕ್ಕೀಡಾಗಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಜೀತೂ ಪಟವಾರಿ, ಕೇಂದ್ರ ಓರ್ವ ಮಗನ ಆಸೆಗಾಗಿ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದೆ. ನೋಟ್ ಬ್ಯಾನ್, ಜಿಎಸ್ ಟಿ, ಬೆಲೆ ಏರಿಕೆ, ನಿರುದ್ಯೋಗ ಮತ್ತು ನಿಧಾನಗತಿ ಈ ಐದಕ್ಕೆ ಜನ್ಮ ನೀಡಿತು. ಆದ್ರೆ ಅಭಿವೃದ್ಧಿ ಹೆಸರಿನ ಮಗನ ಜನನವೇ ಆಗಲಿಲ್ಲ ಎಂದಿ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಟ್ವೀಟ್ ಗೆ ಬಿಜೆಪಿ ನಾಯಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ಬಲೆಯಲ್ಲಿ ಇದೀಗ ತಮ್ಮ ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ.