ಸೂರತ್ : 26 ವರ್ಷದ ಯುವಕನೊಬ್ಬ ತನ್ನ ಮಾಜಿ ಗೆಳತಿಯ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರೋಪೈಲ್ ನ್ನು ರಚಿಸಿ ಅದರಲ್ಲಿ ಆಕೆಯ ಮಾರ್ಫಡ್ ಫೋಟೊಗಳನ್ನು ಹಂಚಿಕೊಂಡಿದ್ದಾನೆ.
ಯುವಕ ಹಾಗೂ ಸಂತ್ರಸ್ತೆ 5 ವರ್ಷಗಳಿಂದ ಸಂಬಂಧದಲ್ಲಿದ್ದರು . ನಂತರ ಅವರು ಸಂಬಂಧವನ್ನು ಮುರಿದುಕೊಂಡರು. ಆದರೆ ಇತ್ತೀಚೆಗೆ ಆತ ಆಕೆಯ ಸಂಬಂಧ ಮುಂದುವರಿಸಲು ಬಯಸಿದ್ದಾನೆ. ಇದಕ್ಕೆ ಆಕೆ ಒಪ್ಪದಿದ್ದಾಗ ಕೋಪಗೊಂಡ ಆತ ಆತ ಆಕೆಯ ಹೆಸರಿನಲ್ಲಿ ನಕಲಿ ಖಾತೆ ರಚಿಸಿ ಅದರಲ್ಲಿ ಆಕೆಯ ಮಾರ್ಫಡ್ ಫೋಟೊಗಳನ್ನು ಅಪ್ಲೋಡ್ ಮಾಡಿದ್ದಾನೆ.
ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.