Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ಯಾಂಕ್ ಗೆ ನುಗ್ಗಿ 10ಲಕ್ಷ ದೋಚಿದ 10ರ ಬಾಲಕ

ಬ್ಯಾಂಕ್ ಗೆ ನುಗ್ಗಿ 10ಲಕ್ಷ ದೋಚಿದ 10ರ ಬಾಲಕ
ಇಂದೋರ್ , ಗುರುವಾರ, 16 ಜುಲೈ 2020 (08:18 IST)
ಇಂದೋರ್ : ಬ್ಯಾಂಕ್ ಗೆ ನುಗ್ಗಿದ 10 ವರ್ಷದ ಬಾಲಕ 10ಲಕ್ಷ ರೂ.ಗಳಿದ್ದ ಬ್ಯಾಗ್ ದೋಚಿದ ಘಟನೆ ಮಧ್ಯಪ್ರದೇಶದ ನೀಮಚ್ ಜಿಲ್ಲೆಯ ಜವಾದ್ ನಗರದ  ಸಹಕಾರಿ ಬ್ಯಾಂಕ್ ನಲ್ಲಿ ನಡೆದಿದೆ.

ಬೆಳಿಗ್ಗೆ ಸರಿಸುಮಾರು 11 ಗಂಟೆಗೆ ಬ್ಯಾಂಕ್ ಗೆ ಬಂದ ಬಾಲಕ 30 ನಿಮಿಷ ಬ್ಯಾಂಕ್ಯೊಳಗೆ ಸುತ್ತಾಡಿದ್ದ. ಬಳಿಕ ಕ್ಯಾಶಿಯರ್ ಚೇಂಬರ್ ಗೆ ಹೋಗಿ ನೋಟುಗಳನ್ನು ಕೆಳಗೆ ಬೀಳಿಸುವ ನೆಪದಲ್ಲಿ ಅಲ್ಲೇ ಹಣವಿದ್ದ ಬ್ಯಾಗ್ ಎತ್ತಿಕೊಂಡು ಹೊರಗೆ ನಡೆದಿದ್ದಾನೆ. ಬ್ಯಾಂಕ್ ಸೆಕ್ಯೂರಿಟಿ ಬಾಲಕನ ವರ್ತನೆಯಿಂದ ಅನುಮಾನಗೊಂಡು ಆತನನ್ನು ಹಿಂಬಾಲಿಸಿದ ಕಾರಣ ಈ ಕೃತ್ಯ ತಿಳಿದುಬಂದಿದೆ.

ಪೊಲೀಸರು ಬ್ಯಾಂಕ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಅವನ ಹಿಂದೆ ಗ್ಯಾಂಗ್ ವೊಂದು ಇರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರ ಎಸಗುತ್ತಿದ್ದ ಪತ್ರಿಕೆ ಮಾಲೀಕ ಅರೆಸ್ಟ್