Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

88 ವಿದ್ಯಾರ್ಥಿನಿಯರನ್ನು ನಗ್ನಗೊಳಿಸಿ ಶಿಕ್ಷೆ ನೀಡಿದ ಮೂವರು ಶಿಕ್ಷಕರು

88 ವಿದ್ಯಾರ್ಥಿನಿಯರನ್ನು ನಗ್ನಗೊಳಿಸಿ ಶಿಕ್ಷೆ ನೀಡಿದ ಮೂವರು ಶಿಕ್ಷಕರು
ಇಟಾನಗರ್ , ಗುರುವಾರ, 30 ನವೆಂಬರ್ 2017 (17:10 IST)
ಮುಖ್ಯ ಶಿಕ್ಷಕಿಯ ವಿರುದ್ಧ ಅಸಭ್ಯ ಶಬ್ದಗಳನ್ನು ಬರೆದಿದ್ದಾರೆ ಎಂದು ಆರೋಪಿಸಿ 88 ವಿದ್ಯಾರ್ಥಿನಿಯರನ್ನು ಮೂವರು ಶಿಕ್ಷಕಿಯರು ನಗ್ನಗೊಳಿಸಿ ಶಿಕ್ಷೆ ನೀಡಿದ ಘಟನೆ ವರದಿಯಾಗಿದೆ. 
 
ಪಾಪುಮ್ ಪಾರೆ ಜಿಲ್ಲೆಯ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದ 6 ಮತ್ತು 7 ನೇ ತರಗತಿಗಳ ಎಂಬತ್ತೆಂಟು ವಿದ್ಯಾರ್ಥಿಗಳನ್ನು ನಗ್ನಗೊಳಿಸಿದ ಘಟನೆ ನವೆಂಬರ್ 23 ರಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ನವೆಂಬರ್ 27 ರಂದು ವಿದ್ಯಾರ್ಥಿನಿಯರು ವಿದ್ಯಾರ್ಥಿ ಸಂಘಟನೆಯಾದ ಆಲ್ ಸಗಾಲೀ ಸ್ಟೂಡೆಂಟ್ಸ್ ಯೂನಿಯನ್ (ಎಎಸ್ಎಸ್ಯು) ಗೆ ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.  
 
ಮುಖ್ಯಶಿಕ್ಷಕ ಮತ್ತು ವಿದ್ಯಾರ್ಥಿಯೊಬ್ಬಳ ಬಗ್ಗೆ ಅಸಹ್ಯವಾಗಿ ಬರೆದ ಪತ್ರವನ್ನು ಹುಡುಕಲು ಮೂವರು ಶಿಕ್ಷಕರು ವಿದ್ಯಾರ್ಥಿನಿಯರನ್ನು ನಗ್ನಗೊಳಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದಾಖಲಾಗಿದೆ.
 
ಆರೋಪಿ ಶಿಕ್ಷಕರ ವಿರುದ್ಧ ದೂರು ದಾಖಲಾಗಿರುವುದನ್ನು ಖಚಿತಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟುಮ್ಮೆ ಅಮೋ, ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಬಿಗ್‌ಬಿ ಗಿಂತ ಉತ್ತಮ ನಟ: ರಾಹುಲ್ ಗಾಂಧಿ