ಚಂಡೀಘಡ: ಸಾಮಾನ್ಯವಾಗಿ ಪಿಯುಸಿ ಪಾಸಾಗುವಾಗ ನಮಗೆಷ್ಟು ವರ್ಷವಾಗಿರುತ್ತದೆ? 18 ಅಥವಾ 25 ವರ್ಷದೊಳಗೆ ಪಿಯುಸಿ ಮುಗಿಸಿರುತ್ತೇವೆ. ಆದರೆ ಹರ್ಯಾಣದ ಮಾಜಿ ಸಿಎಂ ಪಿಯುಸಿ ಪಾಸು ಮಾಡಿರುವುದು ಇದೀಗ. ತಮ್ಮ 82 ನೇ ವಯಸ್ಸಿನಲ್ಲಿ!
ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ತಮ್ಮ 82 ನೇ ವಯಸ್ಸಿನಲ್ಲಿ ಅಂತೂ ಇಂತೂ ಪಿಯುಸಿ ಮುಗಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಚೌಟಾಲಾ ಸದ್ಯಕ್ಕೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ!
ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಚೌಟಾಲಾ ಸದ್ಯಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಮೊಮ್ಮಗಳ ಮದವೆಗಾಗಿ ಪರೋಲ್ ನಲ್ಲಿ ಬಿಡುಗಡೆಯಾಗಿದ್ದರು. ಆದರೆ ಖೈದಿಗಳಿಗಾಗಿ ಪರೀಕ್ಷಾ ಕೇಂದ್ರ ತಿಹಾರ್ ಜೈಲಿನೊಳಗೇ ಇತ್ತು. ಹೀಗಾಗಿ ಅನಿವಾರ್ಯವಾಗಿ ಚೌಟಾಲಾ ಜೈಲಿಗೆ ಹಿಂತಿರುಗಿ ಪರೀಕ್ಷೆ ಬರೆದಿದ್ದಾರಂತೆ.
ಮುಂದೆ ಅವರಿಗೆ ಬಿಎ ಪದವಿ ಪಡೆಯುವ ಮಹದಾಸೆಯೂ ಇದೆ ಎಂದು ಅವರ ಪುತ್ರ ಅಭಯ್ ಸಿಂಗ್ ಚೌಟಾಲಾ ಹೇಳಿಕೊಂಡಿದ್ದಾರೆ. ಚೌಟಾಲಾಗೆ ಚಿಕ್ಕ ವಯಸ್ಸಿದ್ದಾಗ ಓದಲು ಮನಸ್ಸಿದ್ದರೂ, ಕೌಟುಂಬಿಕ ಸಮಸ್ಯೆಯಿಂದಾಗಿ ಓದಲು ಆಗಿರಲಿಲ್ಲವಂತೆ. ಅದನ್ನೀಗ ಅವರು ಪೂರೈಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ