ಜಂಗಲ್ ಬುಕ್ ಸಿನಿಮಾದಲ್ಲಿ ಬಾಲಕೊನೊಬ್ಬ ಕಾಡು ಪ್ರಾಣಿಗಳ ಜೊತೆ ವಾಸವಿದ್ದ ಕಥೆಯನ್ನ ನೋಡಿದ್ದೀರಿ. ಉತ್ತರ ಪ್ರದೇಶದಲ್ಲೂ ಸಹ ಕೋತಿಗಳ ಜೊತೆ ವಾಸವಿದ್ದ 8 ವರ್ಷದ ಬಾಲಕಿಯೊಬ್ಬಳು ಪೊಲೀಸರಿಗೆ ಸಿಕ್ಕಿದ್ದಾಳೆ.ಕೋತಿಗಳ ಗುಂಪಿನಲ್ಲಿದ್ದುಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದ ಬಾಲಕಿಯನ್ನ ಪೊಲೀಸರು ರಕ್ಷಿಸಿದ್ದಾರೆ.
ಎಸ್`ಐ ಸುರೇಶ್ ಯಾದವ್ ತಟಾರ್ನಿಯಾ ಘಾಟ್ ವನ್ಯಜೀವಿ ರಕ್ಷಿತಾರಣ್ಯದಲ್ಲಿ ರೊಟೀನ್ ಡ್ಯೂಟಿಯಲ್ಲಿದ್ದಾಗ ಕೋತಿಗಳ ಗುಂಪಿನಲ್ಲಿದ್ದ ಬಾಲಕಿ ಕಣ್ಣಿಗೆ ಬಿದ್ದಿದ್ದಾಳೆ.
ಬಾಲಕಿಯ ರಕ್ಷಣೆಗೆ ಯತ್ನಿಸಿದಾಗ ಬರಲು ನಿರಾಕರಿಸಿದ್ದಾಳೆ. ಕೋತಿಗಳ ಜೊತೆ ಆರಾಮವಾಗಿರುವ ರೀತಿ ವಿರೋಧ ವ್ಯಕ್ತಪಡಿಸಿವೆ. ಬಾಲಕಿ ಜೊತೆ ಕೋತಿಗಳು ಸಹ ಕಿರುಚಿ ವಿರೋಧ ವ್ಯಕ್ತಪಡಿಸಿವೆ. ಆದರೂ ಬಿಡದ ಪೊಲೀಸರು ಹರಸಾಹಸ ಪಟ್ಟು ಬಾಲಕಿಯನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಲಕಿಗೆ ಮಾತುಗಳು ಬರುತ್ತಿಲ್ಲ, ಭಾಷೆ ಅರ್ಥವಾಗುತ್ತಿಲ್ಲ, ಮನುಷ್ಯರನ್ನ ನೋಡಿದರೆ ಗಾಬರಿಪಡುತ್ತಿದ್ದಾಳೆ. ಹೊಸ ಜಗತ್ತಿಗೆ ಬಂದ ರೀತಿ ವರ್ತಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಏನನ್ನಾದರೂ ತಿನ್ನಲು ಕೊಟ್ಟರೆ ಕೈಯಿಂದ ತೆಗೆದುಕೊಳ್ಳದೆ ನೇರ ಬಾಯಿ ಹಾಕಿ ತಿನ್ನುತ್ತಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ, ತರಬೇತಿ ನಡೆಯುತ್ತಿದ್ದರೂ ಬದಲಾವಣೆ ತೀರಾ ನಿದಾನಗತಿಯಲ್ಲಿದೆ.