Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕದಲ್ಲಿ 8% ಜನರು ಮಾನಸಿಕ ರೋಗಿಗಳು

ಕರ್ನಾಟಕದಲ್ಲಿ 8% ಜನರು ಮಾನಸಿಕ ರೋಗಿಗಳು
ಬೆಂಗಳೂರು , ಮಂಗಳವಾರ, 25 ಅಕ್ಟೋಬರ್ 2016 (15:08 IST)
2016 ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ (NMHS)ಯ ಫಲಿತಾಂಶದ ಪ್ರಕಾರ 50 ಮಿಲಿಯನ್ ವಯಸ್ಕ ಭಾರತೀಯರು ವಿವಿಧ ರೀತಿಯ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದು ಅವರಿಗೆ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿದು ಬಂದಿದೆ.
ಕೇಂದ್ರದ ಆದೇಶದ ಮೇರೆಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (Nimhans)  ಬೆಂಗಳೂರು ಈ ಸಮೀಕ್ಷೆಯನ್ನು  ಕಾರ್ಯಗತಗೊಳಿಸಿತ್ತು. 
 
ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಣಿಪುರ ಮತ್ತು ಅಸ್ಸಾಂನ 40,000 ವಯಸ್ಕರು ಮತ್ತು  1,200 ಹದಿಹರೆಯದವರನ್ನು ಈ ಸಮೀಕ್ಷೆಯಲ್ಲಿ ಬಳಸಲಾಗಿತ್ತು. 
 
ಅತಿ ಹೆಚ್ಚು ಮಾನಸಿಕ ಅನಾರೋಗ್ಯ ಪೀಡಿತವಾದ ರಾಜ್ಯಗಳಲ್ಲಿ ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಮಣಿಪುರ, ಅಸ್ಸಾಂ ಮುಂಚೂಣಿಯಲ್ಲಿವೆ. ಕರ್ನಾಟಕದ ಜನಸಂಖ್ಯೆಯ ಸುಮಾರು 8% ಮಾನಸಿಕ ಕಾಯಿಲೆ ಬಳಲುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಅದರಲ್ಲಿ 7.3% ಜನರು 13-17 ವರ್ಷ ವಯಸ್ಸಿನ ಒಳಗಿನವರಾಗಿದ್ದು ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ. 
 
ಉತ್ಪಾದಕ ವಯಸ್ಸಿನವರು (30 -49 ವರ್ಷ) ಮತ್ತುಹಿರಿಯ ಹಿರಿಯ ನಾಗರಿಕರು (60 ವರ್ಷಕ್ಕೂ ಮೇಲ್ಪಟ್ಟು) " ಮಾನಸಿಕ ಆರೋಗ್ಯದ ಸಮಸ್ಯೆಯ ಬಾಧೆಗೊಳಗಾದವರಲ್ಲಿ ಹೆಚ್ಚಿನ ಪಾಲನ್ನು ಹೊಂದಿದ್ದಾರೆ ಎಂದು ಅಧ್ಯಯನ ಬಹಿರಂಗ ಪಡಿಸಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಕೋಟಿ ಹಣ ಯಡ್ಡಿಗೆ ಗೊತ್ತು; ರಾಜ್ಯ ರಾಜಕೀಯದಲ್ಲಿ ಬಿರುಗಾಳಿ