Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಮಯಕ್ಕೆ ಸರಿಯಾಗಿ ಊಟ ಕೊಡಲಿಲ್ಲವೆಂದು ಈ ವೃದ್ಧ ಪತ್ನಿಗೆ ಕೊಟ್ಟ ಶಿಕ್ಷೆಯೇನು ಗೊತ್ತಾ?!

ಸಮಯಕ್ಕೆ ಸರಿಯಾಗಿ ಊಟ ಕೊಡಲಿಲ್ಲವೆಂದು ಈ ವೃದ್ಧ ಪತ್ನಿಗೆ ಕೊಟ್ಟ ಶಿಕ್ಷೆಯೇನು ಗೊತ್ತಾ?!
Gazhiabad , ಸೋಮವಾರ, 10 ಜುಲೈ 2017 (12:12 IST)
ಗಾಝಿಯಾಬಾದ್: ಮದ್ಯಪಾನ ಮನುಷ್ಯನನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಸರಿಯಾದ ಸಮಯಕ್ಕೆ ಊಟ ಕೊಡಲಿಲ್ಲವೆಂದು ವೃದ್ಧ ಪತಿಯೊಬ್ಬ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ನಡೆದಿದೆ.


ರಾತ್ರಿ 9 ಗಂಟೆ ವೇಳೆಗೆ ಕುಡಿದ ಮತ್ತಿನಲ್ಲಿ ಮನೆಗೆ ಬಂದ ಆರೋಪಿ ಅಶೋಕ್ ಕುಮಾರ್ (60) ರಾತ್ರಿ ಸುಮಾರು 11.45 ಗಂಟೆ ಸುಮಾರಿಗೆ ಪತ್ನಿಗೆ ಗುಂಡಿಕ್ಕಿ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಸಂದರ್ಭ ಆರೋಪಿಯ ಇಬ್ಬರು ಮಕ್ಕಳು, ಮೊಮ್ಮಕ್ಕಳು ಮನೆಯಲ್ಲೇ ಇದ್ದರು. ಘಟನೆ ಬಗ್ಗೆ ಆರೋಪಿಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾನೆ. ಅದರಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿಯಿದ್ದ ಗನ್ ಅಕ್ರಮವಾಗಿದ್ದು, ಇದು ಆತನ ಕೈಗೆ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಹೋಗಬೇಕಾದರೆ 5 ಹೆಣ ಬೀಳಬೇಕಾಯ್ತಾ?’