ಆದಾಯ ತೆರಿಗೆ ಇಲಾಖೆ ಕರ್ನಾಟಕದ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ 39 ಸ್ಥಳಗಳಲ್ಲಿ ಐಟಿ ದಾಳಿ ನಡೆದಿದೆ. ಡಿ.ಕೆ. ಶಿವಕುಮಾರ್ ಅವರ ದೆಹಲಿ ನಿವಾಸದಲ್ಲಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಐಟಿ ಇಲಾಖೆ ಈ ವರದಿಗಳನ್ನ ನಿರಾಕರಿಸಿದೆ.
ಈ ಮಧ್ಯೆ, ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸ. ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ಬಗ್ಗೆ ಸ್ಪಷ್ಟಪಡಿಸಿರುವ ಐಟಿ ಇಲಾಖೆ, ಬೇರೆ ಶಾಸಕರ ಬಳಿ ಶೋಧ ನಡೆಸಿಲ್ಲ. ಡಿ.ಕೆ. ಶಿವಕುಮಾರ್`ಗೆ ಸಂಬಂಧಿಸಿದಂತೆ ಮಾತ್ರ ದಾಳಿ ನಡೆದಿದೆ.
ಇತ್ತ, ಈಗಲ್ ಟನ್ ರೆಸಾರ್ಟ್ ಮೇಲಿನ ದಾಳಿ ಬಳಿಕ ಡಿ.ಕೆ. ಶಿವಕುಮಾರ್ ಅವರನ್ನ ಐಟಿ ಅಧಿಕಾರಿಗಳು ಸದಾಶಿವನಗರದ ನಿವಾಸಕ್ಕೆ ಕರೆತಮದಿದ್ದು, ವಿಚಾರಣೆ ನಡೆಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ