Webdunia - Bharat's app for daily news and videos

Install App

ಇದು ಬಾಲಿವುಡ್ ಸಿನಿಮಾ ಸ್ಟೋರಿ ಅಲ್ಲ, ಸತ್ಯ ಕಥೆ

Webdunia
ಶನಿವಾರ, 24 ಡಿಸೆಂಬರ್ 2016 (16:00 IST)
ಆಕೆ ಬರೊಬ್ಬರಿ 40 ವರ್ಷದ ಹಿಂದೆ ಸತ್ತಿದ್ದಳು. ಅಂತಿಮ ಸಂಸ್ಕಾರವನ್ನು ಮಾಡಲಾಗಿತ್ತು. ಆದರೆ ಏಕಾಏಕಿ ಆಕೆ ಮನೆಮುಂದೆ ಬಂದು ನಿಂತಿದ್ದಾಳೆ. ಅದು ಕೂಡ ಬರೊಬ್ಬರಿ 40 ವರ್ಷದ ಬಳಿಕ... ಇದೇನಿದು ಬಾಲಿವುಡ್ ಸಿನಿಮಾ ಸ್ಟೋರಿ ಎನ್ನುತ್ತೀರಾ?ಅಲ್ಲ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಸತ್ಯ ಘಟನೆ ಇದು. 
ಘಟನೆ ವಿವರ: ಜಿಲ್ಲೆಯ ಬಿದ್ನೂ ಗ್ರಾಮದ ನಿವಾಸಿ ವಿಲಾಸಾಗೆ ಕಳೆದ 40 ವರ್ಷದ ಹಿಂದೆ ಅಂದರೆ 1976ರಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕಾಳಿಂಗ ಸರ್ಪ ಕಚ್ಚಿತ್ತು. ಆಕೆ ಮನೆಗೆ ಮರಳಿದ ಬಳಿಕ ನಾಟಿ ವೈದ್ಯರಿಂದ ಚಿಕಿತ್ಸೆ ನೀಡಲಾಯಿತು. ಪ್ರಜ್ಞೆ ಕಳೆದುಕೊಂಡ ಆಕೆ ತನ್ನ ಚಿಕಿತ್ಸೆಗೆ ಸ್ಪಂದಿಸದೆ ಸತ್ತು ಹೋದಳು ಎಂದು ವೈದ್ಯ ಹೇಳಿದ್ದು ಆಕೆಯ ಪರಿವಾರದವರು ಅಂತಿಮ ಸಂಸ್ಕಾರ ನಡೆಸಿ ದೇಹವನ್ನು ಗಂಗೆಯಲ್ಲಿ ತೇಲಿ ಬಿಟ್ಟಿದ್ದರು. ಆದರೆ ಮತ್ತೀಗ ಆಕೆ ಜೀವಂತ ಮರಳಿದ್ದಾಳೆ.
 
ಹಾಗಾದರೆ ಆಗಿದ್ದೇನು: ಹಾವಿನ ವಿಷವೇರಿ ವಿಲಾಸ ಸತ್ತಿರಲಿಲ್ಲ. ಆಕೆ ಪ್ರಜ್ಞೆ ತಪ್ಪಿದ್ದಳು. ಗಂಗೆಯಲ್ಲಿ ತೇಲಿ ಬಿಟ್ಟ ಆಕೆಯ ದೇಹ ಕನೌಜ ಜಿಲ್ಲೆಗೆ ತಲುಪಿದೆ. ಮೀನುಗಾರರು ಆಕೆಯನ್ನು ರಕ್ಷಿಸಿದ್ದರು. ಬದುಕುಳಿದ ಆಕೆಗೆ ಹಿಂದಿನ ನೆನಪುಗಳೇನು ಇರಲಿಲ್ಲ. 
 
ಇತ್ತೀಚಿಗೆ ಆಕೆಗೆ ಹಳೆಯ ನೆನಪುಗಳು ಮರುಕಳಿಸಿದ್ದು, ಬಾಲಕಿಯೊಬ್ಬಳ ಜತೆ ಹೇಳಿಕೊಂಡಿದ್ದಾಳೆ. ಬಾಲಕಿ ತನ್ನ ಚಿಕ್ಕಪ್ಪನಿಗೆ ಇದನ್ನೆಲ್ಲ ಹೇಳಿದ್ದು ಆತ ಮಹಿಳೆಯ ಊರಿನ ಚೇತಾರಾಮ್(82) ಎಂಬುವವನ ಜತೆ ಇದನ್ನು ಪ್ರಸ್ತಾಪಿಸಿದ್ದಾನೆ. ಅದೃಷ್ಟವಶಾತ್ ಚೇತಾರಾಮ್ ಕೂಡ ವಿಲಾಸಾ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ. 
 
ಶುಕ್ರವಾರ ವಿಲಾಸಾ ತನ್ನ ಮನೆಗೆ ಮರಳಿದ್ದು ಆಕೆಯ ಪುತ್ರಿಯರಾದ ರಾಮ ಕುಮಾರಿ ಮತ್ತು ಮುನ್ನಿ ತಮ್ಮ ಕಣ್ಣುಗಳನ್ನು ತಾವೇ ನಂಬದಾದರು.
 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ