ನವದೆಹಲಿ: 2011ರ ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಪುತ್ರ, ಸೈಯದ್ ಶಾಹಿದ್ ಯೂಸೂಫ್ ನನ್ನು ಬಂಧಿಸಿದ್ದಾರೆ.
ಎನ್ಐಎ ತಂಡ ಯೂಸೂಫ್ ನನ್ನು ವಿಚಾರಣೆ ನಡೆಸುತ್ತಿದೆ. ಅ. 16 ರಂದು ವಿಚಾರಣೆಗೆ ಹಾಜರಾಗಬೇಕೆಂದು ಎನ್ಐಎ ಯೂಸೂಫ್ ಗೆ ಸಮನ್ಸ್ ಜಾರಿ ಮಾಡಿ, ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗೆ ಉತ್ತರದ ಅಗತ್ಯವಿದೆ ಎಂದು ಎನ್ಐಎ ಹೇಳಿತ್ತು.
ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ನ ಮೂರನೇ ಪುತ್ರ ಶಾಹಿದ್ ಯೂಸೂಫ್. ಈತ ಬುಡ್ಗಾಮ್ ಸೋಯಿಬುಗ್ ನ ನಿವಾಸಿ. ಕೃಷಿ ಪದವಿ ಪಡೆದಿರುವ ಯೂಸೂಫ್, ಜಮ್ಮು ಕಾಶ್ಮೀರ ಸರ್ಕಾರದಲ್ಲಿ ಕೃಷಿ ಇಲಾಖೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ಯೂಸೂಫ್ ಹವಾಲಾ ಮೂಲಕ ಹಣ ಸ್ವೀಕರಿಸಿ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ನೀಡುತ್ತಿರುವುದಾಗಿ ಆರೋಪ ಕೇಳಿಬಂದಿದೆ.